Advertisement

ಗುರುಮಠಕಲ್ಗೆ ಸೇಡಂನ ಕೆಲ ಹಳ್ಳಿ ಸೇರಿಸಿ

03:29 PM Jun 23, 2019 | Naveen |

ಗುರುಮಠಕಲ್: ಸೇಡಂ ತಾಲೂಕಿನ ಹಲವು ಹಳ್ಳಿಗಳನ್ನು ಗ್ರಾಮಸ್ಥರ ಅನುಕೂಲದ ಹಿತದೃಷ್ಟಿಯಿಂದ ಗುರುಮಠಕಲ್ ತಾಲೂಕಿಗೆ ಸೇರ್ಪಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಚಂಡರಿಕಿಯಲ್ಲಿ ಮುಖ್ಯಮಂತ್ರಿಗಳ ಜನತಾದರ್ಶನ ನಡೆಸುತ್ತಿದ್ದ ವೇದಿಕೆ ಬಳಿ ಸೇಡಂ ಶಾಸಕ ರಾಜಕುಮಾರ ಪಾಟೀಲ ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಸೇಡಂ ತಾಲೂಕು ಯಾನಾಗುಂದಿ ಗ್ರಾಮದಿಂದ ಗುರುಮಠಕಲ್ ಕ್ಷೇತ್ರದ ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಸ್ಥಳದವರೆಗೆ ಪಾದಯಾತ್ರೆಯಲ್ಲಿ ತೆರಳಿ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಸೇಡಂನಲ್ಲಿ ಸಾಲ ಮನ್ನಾಕ್ಕೆ ಚಾಲನೆ ನೀಡಿ ವರ್ಷ ಕಳೆದರೂ ರೈತರಿಗೆ ಲಾಭ ಸಿಕ್ಕಿಲ್ಲ. ಸಾಲ ಮನ್ನಾ ಹಾಗೂ ಋಣಮುಕ್ತ ಪತ್ರದ ವಿತರಣೆ ಗೊಂದಲದಿಂದಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಋಣ ಮುಕ್ತ ಪತ್ರವಿಲ್ಲದೆ ಯಾವುದೇ ಬ್ಯಾಂಕ್‌ಗಳು ರೈತರಿಗೆ ಹೊಸ ಸಾಲ ನೀಡದಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ ಎಂದು ತಿಳಿಸಿದರು.

ಮರಳು ಸಾಗಾಣಿಕೆಗೆ ಸರಳ ನೀತಿ ಜಾರಿಗೊಳಿಸಬೇಕು. ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ ಸಂಪೂರ್ಣ ದಿವಾಳಿ ಹಂತಕ್ಕೆ ತಲುಪಿದ್ದು, ಅದನ್ನು ಬಲಪಡಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾಗಿಣಾ ನದಿ ಎರಡು ಬದಿಗಳಲ್ಲಿ ಸುಮಾರು 160 ಕಿ.ಮೀ ದೂರ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಕಾಗಿಣಾ ನದಿ ನೀರು ಬಳಕೆಗೆ ಏತ ನೀರಾವರಿ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಒಳಗೊಂಡ ಮನವಿ ಸಲ್ಲಿಸಿದರು.

ಈ ವೇಳೆ ಸೇಡಂ ವಿಧಾನಸಭಾ ಕ್ಷೇತ್ರದ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಸಹಕಾರದ ಅವಶ್ಯಕತೆಯಿದೆ ಎಂದು ತೇಲ್ಕೂರ ಹೇಳಿದರು.

Advertisement

ಈ ವೇಳೆ ಸಿಎಂ ಕುಮಾರಸ್ವಾಮಿ ಮಾತನಾಡಿ, ಸಮಿತಿ ರಚಿಸಿ ಸಣ್ಣಪುಟ್ಟ ಬದಲಾವಣೆ ಸೇರಿದಂತೆ ಸೇಡಂನ ಹಳ್ಳಿಗಳನ್ನು ಸೇರಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next