Advertisement

ಗುರುಕುಲ ಕಾಲೇಜ್‌ ವಿಜ್ಞಾನ-ವಾಣಿಜ್ಯದಲ್ಲಿ ಟಾಪರ್‌

12:37 PM May 01, 2018 | Team Udayavani |

ಕಲಬುರಗಿ: ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಪಿಯುಸಿಯಲ್ಲಿ ಮತ್ತೆ ದಾಖಲೆ ಫಲಿತಾಂಶ ಬಂದಿದೆ. ಈ ಮಹಾವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್‌ ಹಾಗೂ ರಾಜ್ಯಕ್ಕೆ 10ರೊಳಗಿನ ಸ್ಥಾನಗಳನ್ನು ಪಡೆಯುವ ಮೂಲಕ ಸಂಸ್ಥೆಗೆ ಹಾಗೂ ಈ ಭಾಗಕ್ಕೆ ಕೀರ್ತಿ ತಂದಿದ್ದಾರೆ.

Advertisement

ವಿಜ್ಞಾನ ವಿಭಾಗದ ಸಾಯಿದಾ ಕುರತ್‌ ಉಲ್‌ ಐನ್‌ 588 ಅಂಕಗಳನ್ನು ಜಿಲ್ಲೆಗೆ ಟಾಪರ್‌ ಹಾಗೂ ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾಳೆ. ಸೈಯದ್‌ ಹಿಂದಿಯಲ್ಲಿ 97, ಇಂಗ್ಲೀಷದಲ್ಲಿ 95, ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 98, ಗಣಿತದಲ್ಲಿ 99 ಹಾಗೂ ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾಳೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ರಬ್ಜಿತ್‌ಸಿಂಗ್‌ ಛಾಬ್ರಾ ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್‌ ಹಾಗೂ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದಾರೆ. ರಬ್ಜಿತ್‌ ಸಿಂಗ್‌ ಇಂಗ್ಲಿಷ್‌ದಲ್ಲಿ 93, ಹಿಂದಿಯಲ್ಲಿ 96, ವ್ಯವಹಾರ ಅಧ್ಯಯನ 100, ಲೆಕ್ಕಶಾಸ್ತ್ರದಲ್ಲಿ 99, ಸಂಖ್ಯಾಶಾಸ್ತ್ರದಲ್ಲಿ 100, ಮೂಲಗಣಿತದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. 2016ರಲ್ಲೂ ವಿಜ್ಞಾನ ವಿಭಾಗದಲ್ಲಿ ಇದೇ ಕಾಲೇಜು ಜಿಲ್ಲೆಗೆ ಟಾಪರ್‌ ಸ್ಥಾನ ಪಡೆದಿತ್ತು.

ಜಿಲ್ಲೆಗೆ ಟಾಪರ್‌ ಹಾಗೂ ರಾಜ್ಯಕ್ಕೆ 10ರೊಳಗೆ ಸ್ಥಾನ ಪಡೆದ ಸೈಯದ್‌ ಕುರತ್‌ ಸಿರಾಜುದ್ದೀನ್‌ ಹಾಗೂ ರಬ್ಜಿತ್‌ಸಿಂಗ್‌ ಛಾಬ್ರಾ ಅವರಿಗೆ ಕಾಲೇಜಿನ ಪ್ರಾಚಾರ್ಯ ಡಾ| ಭುರ್ಲಿ ಪ್ರಲ್ಹಾದ ಸಿಹಿ ತಿನ್ನಿಸಿ ಶುಭ ಹಾರೈಸಿದರು. ಕಾಲೇಜಿನಲ್ಲಿ ಉತ್ತಮ ಬೋಧನೆ ಹಾಗೂ ಸೂಕ್ತ ಮಾರ್ಗದರ್ಶನವೇ ರಾಜ್ಯ ಮಟ್ಟದಲ್ಲಿ ರ್‍ಯಾಂಕ್‌ ಪಡೆಯಲು ಕಾರಣವಾಗಿದೆ ಎಂದು ಟಾಪರ್‌ ಪಡೆದ ವಿದ್ಯಾರ್ಥಿಗಳಿಬ್ಬರು ತಮ್ಮ
ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿಗೆ ಶೇ. 98.5 ಫಲಿತಾಂಶ ಬಂದಿದೆ. ಕಾಲೇಜಿಗೆ ಹಾಜರಾದ 477 ವಿದ್ಯಾರ್ಥಿಗಳಲ್ಲಿ 217 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಪಡೆದಿದ್ದಾರೆ. 248 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 137
ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಹಾಗೂ 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ಭೌತಶಾಸ್ತ್ರದಲ್ಲಿ 3, ಜೀವಶಾಸ್ತ್ರ 4, ಗಣಿತಶಾಸ್ತ್ರ 13, ರಸಾಯನಶಾಸ್ತ್ರ 4 ಹಾಗೂ ಎಲೆಕ್ಟ್ರಾನಿಕ್‌ ದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಹಾಗೂ ವಾಣಿಜ್ಯ ವಿಭಾಗದ ಸಂಖ್ಯಾಶಾಸ್ತ್ರದಲ್ಲಿ 11, ಲೆಕ್ಕಶಾಸ್ತ್ರದಲ್ಲಿ 10, ವ್ಯವಹಾರ ಅಧ್ಯಯನ 08, ಮೂಲಗಣಿತ 3 ಹಾಗೂ ಹಿಂದಿಯಲ್ಲಿ ಒಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.

ಹರ್ಷ: ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಟಾಪರ್‌ ಸ್ಥಾನ ಫಲಿತಾಂಶ ಬಂದಿರುವುದು ಹಾಗೂ ಕಾಲೇಜ್‌ಗೆ ಅತ್ಯುತ್ತಮ ಫಲಿತಾಂಶ ಬಂದಿರುವುದಕ್ಕೆ ಜಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಜಾಜಿ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಕಾಲೇಜ್‌ನ ನಿರ್ದೇಶಕರು ಮತ್ತು ಪ್ರಾಚಾರ್ಯರಾದ ಡಾ| ಭುರ್ಲಿ ಪ್ರಲ್ಹಾದ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next