ನಗರದ ಜಾಜಿ ಫೌಂಡೇಷನ್ ಸಂಚಾಲಿತ ಗುರುಕುಲ ಸ್ವತಂತ್ರ ಪದವಿ-ಪೂರ್ವ ವಿಜಾnನ ಕಾಲೇಜಿಗೆ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದ್ದು, ಜಿಲ್ಲೆಗೆ ಟಾಪರ್ಸ್ ಆಗಿದ್ದಾರೆ.
Advertisement
ಕಾಲೇಜಿನ ಭಾರ್ಗವ ಕುಲಕರ್ಣಿ, ಪ್ರಜ್ವಲ್ ವಿ.ಸಂಗಮ ಕರ್ನಾಟಕ ಸಿಇಟಿ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದಾರೆ. ಪಿಯುಸಿಯಲ್ಲಿ ಶೇ.94.02ಅಂಕಗಳನ್ನು ಪಡೆದಿದ್ದ ಭಾರ್ಗವ ಕುಲಕರ್ಣಿ ಇಂಜಿನಿಯರಿಂಗ್ ಸಿಇಟಿಯಲ್ಲಿ ರಾಜ್ಯಕ್ಕೆ 44ನೇ ರ್‍ಯಾಂಕ್ ಪಡೆಯುವ ಮುಖಾಂತರ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಪಿಯುಸಿಯಲ್ಲಿ ಶೇ.93.33 ಅಂಕ ಪಡೆದಿದ್ದ ಪ್ರಜ್ವಲ್ ವಿ.ಸಂಗಮ್ ಸಿಇಟಿಯಲ್ಲಿ ರಾಜ್ಯಕ್ಕೆ 98ನೇ ರ್‍ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಸಿಇಟಿಯಲ್ಲಿ 500ರೊಳಗೆ ನಾಲ್ಕು ರ್‍ಯಾಂಕ್‌ಗಳು, ಒಂದು ಸಾವಿರದೊಳಗೆ ಆರು, ಎರಡು ಸಾವಿರದೊಳಗೆ ಒಂಭತ್ತು, ಐದು ಸಾವಿರದೊಳಗೆ 30 ಮತ್ತು 10 ಸಾವಿರದೊಳಗೆ 77 ರ್‍ಯಾಂಕ್‌ಗಳು ಬಂದಿವೆ. ಕಳೆದ ಎಂಟು ವರ್ಷಗಳಿಂದ ಅತ್ಯುತ್ತಮ ಸಾಧನೆ ಮಾಡುತ್ತಲೇ ಬೆಳೆಯುತ್ತಿರುವ ಗುರುಕುಲ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನ ಸಾಧನೆಗೆ ಆಡಳಿತ ಮಂಡಳಿ ಪ್ರೋತ್ಸಾಹ, ಸಿಬ್ಬಂದಿ ಸಹಕಾರ, ಸತತ ಪರಿಶ್ರಮವೇ ಕಾರಣವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಂಡು ಪಾಲಕರು ಸಂತೋಷವಾಗಿದ್ದಾರೆ ಎಂದರು.
Related Articles
Advertisement