Advertisement

ದಹಿಸರ್‌ ಶ್ರೀ ಕಾಶೀ ಮಠದಲ್ಲಿ ಗುರುಕೃಪಾ ಕಲಾರಂಗ ಸಂಸ್ಥೆಯ ಉದ್ಘಾಟನೆ

04:26 PM May 30, 2018 | |

ಮುಂಬಯಿ: ಯಾವುದೇ ಒಂದು ಸಂಸ್ಥೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆ ಸುತ್ತಿದ್ದರೆ, ಆ ಸಂಸ್ಥೆಯು ತನ್ನ ಸಮಾಜದ ಮುಂದಿನ ನವಪೀಳಿಗೆಗೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ದಹಿಸರ್‌ ಶ್ರೀ ಕಾಶಿ ಮಠವು ಗುರುಕೃಪಾ ಕಲಾರಂಗವನ್ನು ಸ್ಥಾಪಿಸಿ ಅದರ ಮುಖಾಂತರ ಜಾನಪದ ಕಲೆಯಲ್ಲಿ ಮೇರು ಕಲೆಯಾದ ಯಕ್ಷಗಾನವನ್ನು ಆಡಿತೋರಿಸಿ ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕತೆಯನ್ನು ಮೂಡಿಸುತ್ತಿ ರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮಿà ಸಮಾಜ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳುವ ಅಗತ್ಯವೂ, ಅನಿವಾರ್ಯವೂ ಇದೆ ಎಂದು ನಾಟಕಕಾರ, ನಿರ್ದೇಶಕ ಸಿ. ಎನ್‌. ಶೆಣೈ ಅವರು ನುಡಿದರು.

Advertisement

ಮೇ 20 ರಂದು ದಹಿಸರ್‌ ಕಾಶೀ ಮಠದ ಸಭಾಗೃಹದಲ್ಲಿ ಗುರುಕೃಪಾ ಕಲಾರಂಗವನ್ನು ಉದ್ಘಾಟಿಸಿ ಮಾತನಾಡಿದ ಇವರು, ಕಾಶೀ ಮಠಾಧೀಶ ಶ್ರೀಮದ್‌ ಸ್ವಯಂ ಮೀಂದ್ರ ಸ್ವಾಮೀಜಿ ಅವರ ಅಭಯ ಹಸ್ತ ಹಾಗೂ ನಮ್ಮಿà ಸಮಾಜದ ಅಧ್ಯಕ್ಷ ಮೋಹನ್‌ದಾಸ್‌ ಪಿ. ಮಲ್ಯ ಅವರ ಪ್ರೇರಣೆಯಿಂದ ಈ ಕಲಾರಂಗವು ಉದ್ಘಾಟನೆ ಗೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಗುರುಕೃಪಾ ಕಲಾರಂಗದ ಪರವಾಗಿ ಯಕ್ಷಗಾನ ಸಂಘಟಕ, ಅರ್ಥದಾರಿ ವಿಠuಲ್‌ ಪ್ರಭು ಕುಕ್ಕೆಹಳ್ಳಿ ಇವರು ಮಾತನಾಡಿ, ಸಂಗೀತ, ನೃತ್ಯ, ತಾಳ, ಮದ್ದಳೆಯೊಂದಿಗೆ ಜರಗುವ ಯಕ್ಷಗಾನ ಪುರಾತನವೂ, ಸಚ್ಚಾರಿತ್ರÂವುಳ್ಳ ಶ್ರೇಷ್ಟ ಕಲೆಯಾಗಿದ್ದು, ಅದರ ಆರಾಧನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ನಮ್ಮ ಯುವ ಪೀಳಿಗೆ ಇಂತಹ ಯಕ್ಷಗಾನವನ್ನು ವೀಕ್ಷಿಸಿ, ಹುರಿದುಂಬಿಸುವ ಕಾರ್ಯ ವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾಶೀ ಮಠವು ಗುರುಕೃಪಾ ಕಲಾರಂಗವನ್ನು ಸ್ಥಾಪಿಸಿ ಅದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೇರಕಶಕ್ತಿಯಾಗಿ ಮಾರ್ಪಡಬೇಕು. ಪಂಢರಾಪುರ್‌ ಚಿ ಕ್ಷೇತ್ರ ಮಹಾತೆ¾ ಎಂಬ ಮರಾಠಿ ಯಕ್ಷಗಾನವು ಇಂದು ಪ್ರದರ್ಶನಗೊಂಡಿರುವುದು ದೈವಿಚ್ಛೆಯಾಗಿದೆ. ಯಕ್ಷಗಾನವನ್ನು ಕಲಿಯುವ ಆಸಕ್ತಿಯುಳ್ಳ ಸಮಾಜ ಬಾಂಧವರು ಕಾಶೀ ಮಠದಲ್ಲಿ ಹೆಸರು ನೋಂದಾಯಿಸಿಕೊಂಡರೆ ಅವರಿಗೆ ಉಚಿತವಾಗಿ ಯಕ್ಷಗಾನವನ್ನು ಕಲಿಸಿಕೊಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಂಢರಾಪುರ ಚೀ ಕ್ಷೇತ್ರ ಮಹಾತೆ¾ ಪ್ರಸಂಗದ ಕೃತಿಯನ್ನು ಸಿ. ಎನ್‌. ಶೆಣೈ ಬಿಡುಗಡೆಗೊಳಿಸಿದರು. 

ಕೃತಿಕಾರ ರಾದ ಎಂ. ಟಿ. ಪೂಜಾರಿ ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿದ ಎಂ. ಟಿ. ಪೂಜಾರಿ ಕೃತಜ್ಞತೆ ಸಲ್ಲಿಸಿದರು. ದಹಿಸರ್‌ ಶ್ರೀ ಕಾಶೀ ಮಠದ ವ್ಯವಸ್ಥಾಪಕ ಮಂಡಳಿಯವರಾದ ಮಧುಸೂದನ್‌ ಪೈ, ಕೆ. ವಿ. ಪಡಿಯಾರ, ಚಂದ್ರಶೇಖರ್‌ ಶೆಣೈ, ಉದಯ ಮಲ್ಯ, ಕುಕ್ಕೆಹಳ್ಳಿ ವಿಠಲ ಪ್ರಭು, ಜಿ. ವಿ. ಶೆಣೈ ಹಾಗೂ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಗುರುಕೃಪಾ ಕಲಾರಂಗ ಸಂಸ್ಥೆಯನ್ನು ಉದ್ಘಾಟಿಸಿದರು.

Advertisement

ಗುರುಕೃಪಾ ಕಲಾರಂಗದ ಉದ್ಧೇಶವನ್ನು ವರದರಾಯ ಮಲ್ಯ ಸಭೆಗೆ ತಿಳಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿಠuಲ ಪ್ರಭು ಅವರ ನೇತೃತ್ವದಲ್ಲಿ ಪಂಢರಾಪುರಚೀ ಕ್ಷೇತ್ರ ಮಹಾತೆ¾ ಮರಾಠಿ ಯಕ್ಷಗಾನ ಪ್ರದರ್ಶನಗೊಂಡಿತು. ಅಧಿಕ ಸಂಖ್ಯೆಯಲ್ಲಿ ಗೌಡ ಸಾರಸ್ವತ ಮತ್ತು ರಾಜಾಪುರ ಸಾರಸ್ವತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next