Advertisement

ಅಧ್ಯಕ್ಷರಾಗಿ ಗುರುರಾಜ ಎಸ್‌. ನಾಯಕ್‌ ಪುನರಾಯ್ಕೆ

11:43 AM Mar 28, 2021 | Team Udayavani |

ಮುಂಬಯಿ: ಮಾಟುಂಗ ಪೂರ್ವದ ಮುಂಬಯಿ ಕನ್ನಡ ಸಂಘದ ವಾರ್ಷಿಕ ಮಹಾಸಭೆಯು ಮಾ. 20ರಂದು ಸಂಘದ ವಾಚನಾಲಯದಲ್ಲಿ ಸಂಘದ ಅಧ್ಯಕ್ಷ ಗುರುರಾಜ ಎಸ್‌. ನಾಯಕ್‌ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಗೌರವ ಕಾರ್ಯದರ್ಶಿ ಸೋಮನಾಥ ಎಸ್‌. ಕರ್ಕೇರ ಕಳೆದ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಸಭೆಯಲ್ಲಿ 2019-2020ನೇ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಮಂಜೂರು ಮಾಡಲಾಯಿತು. 2020-2021ನೇ ಸಾಲಿಗೆ ಎಂ. ಎಂ ಕಿಸ್ತಿ ಆ್ಯಂಡ್‌ ಕಂಪೆನಿ ಸಿಎ ಇವರನ್ನು ಲೆಕ್ಕಪರಿಶೋಧಕರನ್ನಾಗಿ ನೇಮಿಸಲಾಯಿತು.

Advertisement

ಸಂಘವು ಈಗಿರುವ ಕಟ್ಟಡ ಜೂನ್‌ನಿಂದ ನವೀಕರಣವಾಗುತ್ತಿರುವುದರಿಂದ ಕಿರು ಸಭಾಗೃಹದ ಸಮಿತಿಯನ್ನು ರಚಿಸಬೇಕು ಎಂದು ಕಮಲಾಕ್ಷ ಸರಾಫ್‌ ಆಗ್ರಹಿಸಿದರು. ಇದಕ್ಕೆ ಸಭೆಯು ಅನುಮತಿ ನೀಡಿತು. ಸಭೆಯಲ್ಲಿ ಹಾಜರಿದ್ದ ನಾಗೇಶ್‌ ಕೆ. ಕುಂದರ್‌ ಅವರು ಉಪಯುಕ್ತ ಸಲಹೆ-ಸೂಚನೆ ನೀಡಿದರು. ಬಳಿಕ ಎರಡು ವರ್ಷಗಳ ಕಾಲಾವಧಿಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಗುರುರಾಜ ಎಸ್‌. ನಾಯಕ್‌ ಅವರನ್ನು ಪುನರಾಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ| ಎಸ್‌. ಕೆ. ಭವಾನಿ, ಸೋಮನಾಥ ಎಸ್‌. ಕರ್ಕೇರ, ಕಮಲಾಕ್ಷ ಸರಾಫ್‌, ಸುಧಾಕರ ಸಿ. ಪೂಜಾರಿ, ನಾರಾಯಣ ರಾವ್‌, ಮಲ್ಲಿಕಾರ್ಜುನ ಬಡಿಗೇರ, ಎಸ್‌. ಕೆ. ಪದ್ಮನಾಭ, ಪ್ರಫುಲ್ಲಾ ರಾವ್‌, ಡಾ| ರಜನಿ ವಿ. ಪೈ, ನರ್ಮದಾ ಕಿಣಿ, ಶಾರದಾ ಅಂಬೆಸಂಗೆ, ಜಯಂತಿ ಸಿ. ರಾವ್‌, ಸುಗುಣಾ ಶೆಟ್ಟಿ, ಕವಿತಾ ಶ್ರದ್ಧಾ, ಸಂಧ್ಯಾ ಪ್ರಭು, ಪ್ರಭಾ ಸುವರ್ಣ ಅವರು ಆಯ್ಕೆಯಾದರು.

ವರದಿ ವರ್ಷದಲ್ಲಿ ಅಗಲಿದ ಸದಸ್ಯರಿಗೆ, ಹಿತೈಷಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್‌. ಕೆ. ಪದ್ಮನಾಭ ಪ್ರಾರ್ಥನೆಗೈದರು. ಕೋಶಾಧಿಕಾರಿ ಸುಧಾಕರ ಸಿ. ಪೂಜಾರಿ ವಂದಿಸಿದರು. ಸದಸ್ಯರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next