ಗುರುಗ್ರಾಮ್: ಲಿಫ್ಟ್ ನೊಳಗೆ ಸಾಕು ನಾಯಿ ಕಚ್ಚಿದ ಪರಿಣಾಮ ತಾಯಿ ಮತ್ತು ೬ ತಿಂಗಳ ಮಗು ಗಾಯಗೊಂಡಿರುವ ಘಟನೆ ಗುರುಗ್ರಾಮದಲ್ಲಿರುವ ವಸತಿ ಸಮುಚ್ಚಯದಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ನಾಯಿ ಮಾಲೀಕನ ಮೇಲೆ ಪ್ರಕರಣದ ದಾಖಲಾಗಿದೆ.
ಇಲ್ಲಿನ ಸೆಕ್ಟರ್ 50ರಲ್ಲಿರುವ ರೆಸಿಡೆನ್ಶಿಯಲ್ ಸೊಸೈಟಿಯ ಲಿಫ್ಟ್‌ನೊಳಗೆ ಸಾಕು ನಾಯಿಯೊಂದು ದಾಳಿ ಮಾಡಿತ್ತು ನಂತರ ಮಹಿಳೆ ಮತ್ತು ಆರು ತಿಂಗಳ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜುಲೈ 28 ರಂದು ರಾತ್ರಿ ಈ ಘಟನೆ ನಡೆದಿದ್ದು. ಪೊಲೀಸರು ನಾಯಿ ಮಾಲೀಕರ ವಿರುದ್ಧ ಸೋಮವಾರ ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಪತಿ ಜಸ್ವಿಂದರ್ ಸಿಂಗ್ ಶ್ವಾನ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.
ಝೋಮ್ಯಾಟೋ ವ್ಯಕ್ತಿಯ ಬಳಿ ಫುಡ್ ಪಡೆಯಲು ಜುಲೈ 28 ರಂದು ರಾತ್ರಿ 11:30 ರ ಸುಮಾರಿಗೆ ಸಿಂಗ್, ಅವರ ಪತ್ನಿ ಮತ್ತು ಮಗ ನೆಲಮಾಳಿಗೆಗೆ ಹೋಗಲು 7 ನೇ ಮಹಡಿಯಿಂದ ಲಿಫ್ಟ್‌ಗೆ ಹತ್ತಿದರು ಈ ವೇಳೆ ಐದನೇ ಮಹಡಿಯಲ್ಲಿ ಲಿಫ್ಟ್ ಬಾಗಿಲು ಓಪನ್ ಆಗಿದೆ ಈ ವೇಳೆ ಲಿಫ್ಟ್ ಬಳಿ ಬಂದ ಶ್ವಾನ ಮಹಿಳೆ ಮತ್ತು ಮಗುವಿನ ಮೇಲೆ ದಾಳಿ ಮಾಡಿದೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: Dandeli: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ : ಓರ್ವನ ಬಂಧನ