ಗುರುಗ್ರಾಮ : ಪಿರಮಿಡ್ ಅರ್ಬನ್ ಹೋಮ್ಸ್‌ನ ಕಟ್ಟಡದಲ್ಲಿ 6 ವರ್ಷದ ಬಾಲಕನೊಬ್ಬ ಲಿಫ್ಟ್‌ನೊಳಗೆ ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ಸಿಕ್ಕಿಬಿದ್ದ ಘಟನೆ ನಡೆದಿದೆ.
ಆರವ್ ಎಂಬ ಬಾಲಕ ರಾತ್ರಿ 8 ಗಂಟೆ ಸುಮಾರಿಗೆ ಆಟವಾಡಲು ಮನೆಯಿಂದ ಹೊರಗೆ ಬಂದಿದ್ದ. ಬಹಳ ಹೊತ್ತಾದರೂ ಆರವ್ ಮನೆಗೆ ಬಾರದೇ ಇದ್ದಾಗ, ಅವನ ಪೋಷಕರು ಅವನನ್ನು ಹುಡುಕಲು ಪ್ರಾರಂಭಿಸಿದರು ಆದರೆ ಎಲ್ಲೂ ಬಾಲಕನ ಪತ್ತೆಯಾಗಿಲ್ಲ ಕೊನೆಗೆ ಮೂರನೇ ಮಹಡಿಯ ಲಿಫ್ಟ್ ನೊಳಗೆ ಸಿಲುಕಿರುವುದು ಗೊತ್ತಾಗಿದೆ.
ಅಸಲಿಗೆ ಕಟ್ಟಡ ಲಿಫ್ಟ್ ಕೆಟ್ಟು ಹೋಗಿದ್ದು ದುರಸ್ತಿ ಕಾರ್ಯ ನಡೆದಿಲ್ಲ ಹಾಗಾಗಿ ಬಾಲಕನನ್ನು ಹೊರತರಲು ಹರಸಾಹಸ ಪಡಬೇಕಾಯಿತು.
ಮಗುವಿನ ಪೋಷಕರು ವಸತಿ ಸಮುಚ್ಚಯದ ಕಾವಲುಗಾರನ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ದೂರಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ತಪ್ಪು ಯಾರದ್ದೋ ಇರಬಹುದು ತಮ್ಮ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದು ಮಕ್ಕಳ ಪೋಷಕರ ಕರ್ತವ್ಯ, ಹತ್ತಾರು ಮನೆಯಿರುವ ಕಟ್ಟಡದಲ್ಲಿ ಎಲ್ಲ ಹೊಣೆಯನ್ನು ಕಾವಲುಗಾರನ ಮೇಲೆ ಹಾಕುವುದು ಸರಿಯಾದ ವಿಚಾರವೂ ಅಲ್ಲ.
ಇದನ್ನೂ ಓದಿ : ಭಾರತ್ ಜೋಡೋ : ಪಾದಯಾತ್ರೆಯಲ್ಲಿ ಬಾಲಕಿಯ ಚಪ್ಪಲಿ ಸರಿ ಮಾಡಿದ ರಾಹುಲ್