ಶನಿವಾರಸಂತೆ : ಸಮಿಪದ ಅಂಕನಹಳ್ಳಿಯ ಮನೆಹಳ್ಳಿ ಶ್ರೀ ತಪೋ ಕ್ಷೇತ್ರದ ಶ್ರೀಗುರುಸಿದ್ದವೀರೇಶ್ವರ ಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವ ರವಿವಾರ ಸಂಜೆಗೆ ಸಂಪನ್ನಗೊಂಡಿತು.
ಎ. 19ರಿಂದ 21ರ ವರೆಗೆ ನಡೆದ ಮನೆಹಳ್ಳಿ ಮಠದ ಶ್ರೀ ಗುರುಸಿದ್ದವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶ್ರೀ ಗುರುಸಿದ್ದ ವೀರೇಶ್ವರ ಸ್ವಾಮಿಯುವರಿಗೆ ಕಂಕಣ ಧಾರಣೆ, ಮಹಾ ಮಂಗಳಾರತಿ, ಸೂರ್ಯ ಮಂಡಲೋತ್ಸವ, ಶ್ರೀ ಮದನಾದಿ ಅನಗ ನಿರಂಜನ ಪೂಜೆ ಜಂಗಮ ಪೂಜೆ, ಮುಂತಾದ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.
ಎ. 21ರಂದು ರವಿವಾರ ಮುಂ ಜಾನೆ 5 ಗಂಟೆಯಿಂದ ಚೈತ್ರ ಬಹುಳ ತದಿಗೆ ಕಾರ್ಯಕ್ರಮ ನಡೆಯಿತು.
ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರದ ವೀರಭದ್ರೇಶ್ವರ ಸ್ವಾಮಿಗೆ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿಕುಂಡೋತ್ಸವ ಸೇವೆ, ಬೆಳಗ್ಗೆ 7 ಗಂಟೆಗೆ ಶ್ರೀ ಸ್ವಾಮಿಯವರ ಸಣ್ಣ ಚಂದ್ರಮಂಡಲೋತ್ಸವ ಸೇವೆ ಸಲ್ಲಿಸಲಾಯಿತು. ಬೆಳಗ್ಗೆ 9 ಗಂಟೆಗೆ ಸ್ವಾಮಿಯವರ ಅಡ್ಡ ಪಲ್ಲಕಿ ಉತ್ಸವ ನೆರವೇರಿಸಲಾಯಿತು. ಬೆಳಗ್ಗೆ 11 ಗಂಟೆಗೆ ಶ್ರೀ ಪ್ರಸನ್ನ ತಪವನೇಶ್ವರಿ ಅಮ್ಮನವರ ಪ್ರೀತ್ಯರ್ಥ ಮುತ್ತೈದೆ ಸೇವೆ ಸಲ್ಲಿಸಿದ ಬಳಿಕ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಭಕ್ತರಿಗೆ ಅನ್ನದಾನ ಸಂತರ್ಪಣೆಯ ಬಳಿಕ ಮಧ್ಯಾಹ್ನ 1 ಗಂಟೆಗೆ ಶ್ರೀ ಸ್ವಾಮಿಯವರ ದೊಡ್ಡ ಚಂದ್ರ ಮಂಡಲೋತ್ಸವ ಸೇವೆ ನೆರವೇರಿಸಲಾಯಿತು.
ಸಂಜೆ 5.30 ರಿಂದ ಶ್ರೀ ಸ್ವಾಮಿ¿ವರ ಪ್ರಕಾರ ಪಲ್ಲಕಿ ಉತ್ಸವದೊಂದಿಗೆ ಶ್ರೀ ಸ್ವಾಮಿಯವರ ರಥೋತ್ಸವ್ವಕ್ಕೆ ಚಾಲನೆ ನೀಡಲಾಯಿತು.