ಸರ್ಕಾರಿ-ಅರೆಸರ್ಕಾರಿ ಕಚೇರಿ, ಸಂಘ ಸಂಸ್ಥೆಯ ಕಚೇರಿಗಳಿಗೂ ತೆರಳಿ ದುಶ್ಚಟ ಮುಕ್ತ ಜೀವನಸಾಗಿಸಲು ಜನರಿಗೆ ಸಲಹೆ ನೀಡುತ್ತಾರೆ. ಜರಲ್ಲಿನ ಬೀಡಿ, ಸಿಗರೇಟ್, ತಂಬಾಕು ಇನ್ನಿತರ ಮಾದಕ ವ್ಯಸನದ ಪದಾರ್ಥಗಳನ್ನು ತಮ್ಮ ಜೋಳಿಗೆಗೆ ಹಾಕುವ ಮೂಲಕ ಇನ್ನೊಮ್ಮೆ ಇಂಥ ಪದಾರ್ಥಗಳನ್ನು ಸೇವಿಸುವುದಿಲ್ಲ ಎಂದು ಪ್ರಮಾಣ ಮಾಡಿಸಿ, ಭಕ್ತರನ್ನು ಉತ್ತಮ ದಾರಿಗೆ ತರುವ ಶ್ರೀಗಳ ಕಾರ್ಯ ಅನನ್ಯವಾದದ್ದು. ಶ್ರೀಗಳ ಈ ಕಾರ್ಯದಿಂದ ಪ್ರೇರಣೆಗೊಂಡು
ಸಂತಪುರ ಗ್ರಾಮದಲ್ಲಿ 2 ಸಾವಿರ ಜನರು ತಮ್ಮ ವ್ಯಸಗಳಿಂದ ಹೊರ ಬಂದು ಉತ್ತಮ ಜೀವನ ಸಾಗಿಸಲು ಮುಂದಾಗಿದ್ದಾರೆ. ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ದುಶ್ಚಟಗಳಿಂದ ಮುಕ್ತರಾಗಿ ಜೀವಿಸುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪ್ರವಚನಗಳಿಂದ ಜನರಿಗೆ ಉತ್ತಮ ಜೀವನ ಸಾಗಿಸುವಂತೆ
ತಿಳಿಸಲಾಗುತ್ತಿದೆ. ಅದರಂತೆಯೇ ಇಂದಿನ ಯುವಕರಿಗೆ ಹಾಗೂ ವ್ಯಸನಿಗಳಿಗೆ ಉತ್ತಮ ಆರೋಗ್ಯಕರ ಜೀವನ ಸಾಗಿಸುವಂತೆ ಸಲಹೆ ನೀಡಲಾಗುತ್ತಿದೆ. ಧರ್ಮ ರಕ್ಷಣೆ ಹಾಗೂ ಜನರ ಕಲ್ಯಾಣಕ್ಕಾಗಿ ದುಡಿಯುವುದೇ ನಮ್ಮ ಮುಖ್ಯ
ಗುರಿಯಾಗಿದೆ ಎಂದು ಶ್ರೀ ಗುರುಬಸವ ಪಟ್ಟದೇವರು ತಿಳಿಸುತ್ತಾರೆ. ಜಿಲ್ಲೆ ಸೇರಿದಂತೆ ತಾಲೂಕಿನ ಪ್ರತಿಯೊಂದು
ಗ್ರಾಮದ ಯವಕರು, ಹಿರಿಯರು ದುಶ್ಚಟಗಳ ದಾಸರಾಗಿ ತಮ್ಮ ಜೀವನಕ್ಕೆ ತಾವೇ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಮುಂದೆ ಸಮಾಜ ಹಾಗೂ ದೇಶದ ವ್ಯವಸ್ಥೆಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಪಾದಯಾತ್ರೆ ಮೂಲಕ ಮಾಡಲಾಗುತ್ತಿದೆ. ನನ್ನ ಪತಿ ನಿತ್ಯ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಇದರಿಂದ ಬೆಳೆಯುವ ನಮ್ಮ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬಿರುತ್ತಿತ್ತು. ಈ ಕುರಿತು ಹಲವು ಬಾರಿ ಹೇಳಿದರೂ ಪ್ರಯೋಜನವಾಗಿದ್ದಿಲ್ಲ. ಈಗ ಶ್ರೀಗಳು ಮಾಡುತ್ತಿರುವ ದುಶ್ಚಟ ಮುಕ್ತ ಸಮಾಜ ಎನ್ನುವ ಕಾರ್ಯದಿಂದ ನನ್ನ ಪತಿ ಮದ್ಯ ಸೇವನೆ ಬಿಟ್ಟಿದ್ದಾರೆ. ಶ್ರೀಗಳ ಕಾರ್ಯ ತಾಲೂಕಿನಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಸಂತಪುರ ಗ್ರಾಮದ ಗೃಹಿಣಿ ಅಂಬಿಕಾ ಬಿರಾದರ ಹೇಳುತ್ತಾರೆ.
Advertisement