Advertisement

ಗುರು ಸೇವಾ ಸಮಿತಿ,ಬಹ್ರೈನ್‌ ಬಿಲ್ಲವಾಸ್‌: ವಾರ್ಷಿಕೋತ್ಸವ ಸಂಭ್ರಮ

04:20 PM Feb 24, 2019 | Team Udayavani |

ಮುಂಬಯಿ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದ ಅಡಿಯಲ್ಲಿ ಸ್ಥಾಪಿತವಾದ ಗುರು ಸೇವಾ ಸಮಿತಿ  ಮತ್ತು ಬಹ್ರೈನ್‌ ಬಿಲ್ಲವಾಸ್‌ ಇದರ 16ನೇ ವಾರ್ಷಿಕೋತ್ಸವ ಸಂಭ್ರಮವು ಬಹರೈನ್‌ ರಾಜಧಾನಿ ಮನಾಮದ ಶ್ರೀ ಕೃಷ್ಣ ಮಂದಿರದ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.

Advertisement

ಇದೇ ಸಂದರ್ಭದಲ್ಲಿ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾದ  ಸುರೇಂದ್ರ ಉದ್ಯಾವರ ಅವರು ಮಾತನಾಡಿ, ನಾರಾಯಣ ಗುರುಗಳು ನಮ್ಮೆಲ್ಲರಿಗೂ ಸಂಘಟನೆಯಿಂದ ಬಲಯುತರಾಗಿರಿ ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ತತ್ವದಂತೆ ನಾವೆಲ್ಲ ಸಂಘಟಿತರಾಗೋಣ. ಮುಂದಿನ ಕಾಲಾವಧಿಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಅಗತ್ಯವಾಗಿದೆ. ಇಂದಿನ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಸರ್ವರನ್ನು ಅಭಿನಂದಿಸಿದರು.

ಪುರೋಹಿತ ಧನಂಜಯ ಶಾಂತಿ ಅವರು ಮಾತನಾಡಿ, ನಾರಾಯಣ ಗುರುಗಳ ತತ್ವ ಸಂದೇಶ ವಿಶ್ವ ಮಾನವ ಕುಲಕ್ಕೆ ದಾರಿದೀಪ. ಅವರ ಸಂದೇಶ ಸರ್ವ ಕಾಲಕ್ಕೂ ಅನ್ವಯಿಸುವಂತದ್ದು. ಕೊಲ್ಲಿ ರಾಷ್ಟ್ರದ ಈ ಬಹರೇನ್‌ ಮಣ್ಣಿನಲ್ಲಿ ಗುರುಸೇವಾ ಸಮಿತಿಯ ಮುಖೇನ ಬಹ್ರೈನ್‌ ಬಿಲ್ಲವಾಸ್‌ನ ಈ ಕಾರ್ಯಕ್ರಮ ಶ್ಲಾಘನೀಯ. ದ್ವಿತೀಯ ಬಾರಿ ನನ್ನನ್ನು ಆಹ್ವಾನಿಸಿ ಸಮ್ಮಾನಿಸಿದ ಬಹರೇನ್‌ ಬಿಲ್ಲವಾಸ್‌ನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ನೂತನ ಸಮಿತಿಗೆ ಶುಭ ಹಾರೈಸಿದರು.

ವಾರ್ಷಿಕೋತ್ಸವದ ಅಂಗವಾಗಿ ದಾಸ ಭಾರ್ಗವ ಬಿರುದಾಂಕಿತ ಪುರೋಹಿತ ಧನಂಜಯ್‌ ಶಾಂತಿ ಮುಂಬಯಿ ಇವರಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀನಿವಾಸ ಕಲ್ಯಾಣ ಹರಿಕಥಾ ಕಾಲಕ್ಷೇಪವನ್ನು ನಡೆಯಿತು. ಅರ್ಚಕ ಜಯಪ್ರಕಾಶ್‌ರವರು ಪೂಜಾ ವಿಧಿ ವಿಧಾನದಲ್ಲಿ ಸಹಕರಿಸಿದರು. ದಿವ್ಯರಾಜ್‌ ಹಾಗೂ ಯಕ್‌Ò ಅವರು ಹಾರ್ಮೋನಿಯಂ ಮತ್ತು ತಬಲದಲ್ಲಿ ಸಹಕರಿಸಿದರು.

ಈ ಸಂದರ್ಭ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುರೇಂದ್ರ ಉದ್ಯಾವರ, ಉಪಾಧ್ಯಕ್ಷ ದಿನೇಶ್‌ ಬಂಗೇರ, ಗೌರವ ಕಾರ್ಯದರ್ಶಿ  ಭೋಜ ಪೂಜಾರಿ, ಕೋಶಾಧಿಕಾರಿ ಶೈಲೇಶ್‌ ಸುವರ್ಣ, ಜತೆ ಕಾರ್ಯದರ್ಶಿ  ಸಂತೋಷ್‌ ಬಂಗೇರ, ಜತೆ ಕೋಶಾಧಿಕಾರಿ ಶಾಶ್ವತ್‌ ಶಶಿಧರ್‌ ಎರ್ಮಾಳ್‌, ಪುರುಷೋತ್ತಮ ಪೂಜಾರಿ, ರಂಜಿತ್‌, ವಿನಯ್‌, ಗಣೇಶ್‌ ಎಡನೀರು ಇವರನ್ನು ಧನಂಜಯ್‌ ಶಾಂತಿ ಗೌರವಿಸಿದರು.

Advertisement

ಮಹಿಳಾ ವಿಭಾಗದ ಸದಸ್ಯರಾಗಿ ಸುಜಯ ಲಕ್ಷ್ಮೀಶ್‌, ಚಂದ್ರಕಲಾ ಮೋಹನ್‌, ಪೂರ್ಣಿಮಾ ಜಗದೀಶ್‌, ಲೋಲಾಕ್ಷಿ ರಾಜರಾಮ್‌ ಹಾಗೂ ತ್ರಿವೇಣಿ ಗಣೇಶ್‌ ಅವರನ್ನು ಅಭಿನಂದಿಸಲಾಯಿತು.  ಕಾರ್ಯಕ್ರಮದಲ್ಲಿ ಧನಂಜಯ್‌ ಶಾಂತಿಯ ವರನ್ನು ನೆನಪಿನ ಕಾಣಿಕೆ ನೀಡಿ ಸಮ್ಮಾನಿ ಸಲಾಯಿತು.

ಬಂಟರ ಸಂಘ ಬಹರೇನ್‌, ವಿಶ್ವಕರ್ಮ ಸಂಘ, ಮೊಗವೀರ ಸಂಘ, ಕನ್ನಡ ಸಂಘ ಬಹ್ರೈನ್‌ ಮತ್ತು ಇಸ್ಕಾನ್‌ನ ಪದಾಧಿಕಾರಿಗಳು, ಸೌದಿ ಅರೇಬಿಯಾದ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸುಮಾರು 800ಕ್ಕೂ ಮಿಕ್ಕಿದ ಭಕ್ತಾಭಿಮಾನಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಅಧ್ಯಕ್ಷ ರಾಜ್‌ಕುಮಾರ್‌ ಅವರ ಸೂಕ್ತ ಮಾರ್ಗದರ್ಶನದಲ್ಲಿ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ದಾನಿಗಳ ಸಹಕಾರದಿಂದ ಅನ್ನಸಂತರ್ಪಣೆ ಜರಗಿತು. ಲೋಲಾಕ್ಷಿ ರಾಜಾರಾಮ್‌ ಮತ್ತು ಕಮಲಾಕ್ಷ ಅಮೀನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next