Advertisement

ಅಜ್ಞಾನ ಅಳಿದು ಜ್ಞಾನದ ಸಂಪತ್ತು ನೆಲೆಸಲಿ

05:37 PM Jul 28, 2018 | |

ಹಿರೇಕೆರೂರ: ಪ್ರತಿಯೊಬ್ಬರು ಭಕ್ತಿ, ಶ್ರದ್ಧೆ, ಶಾಂತಿ, ತಾಳ್ಮೆಯಿಂದ ಸನ್ಮಾರ್ಗದಲ್ಲಿ ಜೀವನ ಸಾಗಿಸಬೇಕು. ಮನಸ್ಸಿನಲ್ಲಿ ಅಜ್ಞಾನ ತೊರೆದು ಜ್ಞಾನದ ಸಂಪತ್ತು ನೆಲೆಸಿದಾಗ ಯಶಸ್ಸು ಸುಲಭವಾಗಿ ಲಭಿಸುತ್ತದೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ವಿಠ್ಠಲ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜರುಗಿದ 10ನೇ ವರ್ಷದ ಗುರು ಪೌರ್ಣಿಮೆ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸಾಯಿಬಾಬಾರವರು ಮನುಕುಲಕ್ಕೆ ಧರ್ಮದ ಹಾದಿಯಲ್ಲಿ ನಡೆಯುವ ಸನ್ಮಾರ್ಗವನ್ನು ತೋರಿಸಿದ್ದಾರೆ. ಗಳಿಸಿದ ಸಂಪತ್ತು ಧರ್ಮದ ಕಾರ್ಯಗಳಿಗೆ ಸದ್ವಿನಿಯೋಗವಾಗಬೇಕು. ಗುರುಕುಲ ಪದ್ಧತಿಯ ಗುರು ಪರಂಪರೆ ದಿನ ಆಚರಿಸುವ ಭಾಗವಾಗಿ ಗುರು ಪೌರ್ಣಿಮೆಯನ್ನು ನಾಡಿನ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರಂಪರೆಯಿಂದ ಪ್ರತಿಯೊಬ್ಬರು ಧರ್ಮದ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಗುರುವಿನ ಗುಲಾಮನಾಗುವ ತನಕ ಸಿಗದು ನಿನಗೆ ಮೋಕ್ಷ ಎಂಬ ಗಾದೆಯಂತೆ ಗುರುಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು, ಅಂದಾಗ ಇಂತಹ ಉತ್ಸವಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದರು. ವನಜಾ ಪಾಟೀಲ ಮಾತನಾಡಿ, ತಾಯಿಯೇ ಮೊದಲು ಗುರುವಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಶಾಲೆಗಳಲ್ಲಿ ಕೂಡಾ ಶಿಕ್ಷಕರು ಉತ್ತಮ ಸಂಸ್ಕೃತಿ ಕಲಿಸಬೇಕು ಎಂದರು. ನೂತನವಾಗಿ ನಿರ್ಮಾಣಗೊಂಡ ಸಾಯಿ ಬಾಬಾರವರ ಬೆಳ್ಳಿ ಪಾಲಕಿಯನ್ನು ಶಾಸಕ ಬಿ.ಸಿ.ಪಾಟೀಲ ಉದ್ಘಾಟಿಸಿದರು.

ಶಿವಾಜಿರಾವ್‌ ಮಧೂರಕರ ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಸೇವಾಭಿವೃದ್ಧಿ ಸಮೀತಿ ಅಧ್ಯಕ್ಷ ಮಾರುತಿ ಮಧೂರಕರ, ದುರ್ಗಾದೇವಿ ದೇವಸ್ಥಾನದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಜಗದೀಶ ತಂಬಾಕದ, ಪಪಂ ಅಧ್ಯಕ್ಷೆ ರಜಿಯಾ ಅಸದಿ, ಉಪಾಧ್ಯಕ್ಷೆ ಶಿವಲೀಲಾ ರಂಗಕ್ಕನವರ, ಸದಸ್ಯರಾದ ಕುಸುಮಾ ಬಣಕಾರ, ಶಿವಕುಮಾರ ತಿಪ್ಪಶೆಟ್ಟಿ,  ಖಂಡರಾದ ಲಕ್ಷ್ಮಣ  ಕುಂಕುಮಗಾರ, ಮಂಜುಳಾ ಹಳೇಮನಿ, ರುದ್ರಪ್ಪ ಶೆಟ್ಟರ, ಸುರೇಶ ಮಡಿವಾಳರ, ಶಿವಯೋಗೆಪ್ಪ ಶೆಟ್ಟರ, ಶಂಭಣ್ಣ ತಂಬಾಕದ, ಅಶೋಕ ಜಾಡಬಂಡಿ, ಬಸವರಾಜ ಪೂಜಾರ, ಚಂದ್ರು ಮಧೂರಕರ, ರಾಜು ಖಾಂಡ್ಕೆ , ಈರಣ್ಣ ಚಿಟ್ಟೂರ ಹಾಗೂ ಭಕ್ತಾಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next