Advertisement
ಶ್ರೀ ಶಿರಡಿ ಸಾಯಿಬಾಬಾ ಸೇವಾ ಕಲ್ಯಾಣ ಟ್ರಸ್ಟ್‌ನಿಂದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಜಿ, ನವಗ್ರಹಗಳಲ್ಲಿ ಅತಿ ದೊಡ್ಡದಾದ ಗ್ರಹ ಗುರು. ಅಂತೆಯೇ ಲೌಕಿಕ ಬದುಕಿನಲ್ಲಿ ಗುರುವಿನ ಸ್ಥಾನ ಅತ್ಯಂತ ಪ್ರಮುಖ. ಗುರುವಿನ ಒಲುಮೆಯ ಪಡೆಯಲು ಸಾಕಷ್ಟು ಪರಿಶ್ರಮಪಡಬೇಕಾಗುತ್ತದೆ. ಹರ ಮುನಿದರೂ ಗುರು ಕಾಯುವನು… ಎನ್ನುವ ಮಾತಿನಂತೆ ಗುರು ನಮ್ಮನ್ನು ಸದಾ ಕಾಪಾಡುತ್ತಾನೆ. ಅಂತಹ ಗುರುವಿನ ಕೃಪೆಗೆ ಎಲ್ಲರೂ ಪಾತ್ರರಾಗಬೇಕು ಎಂದು ತಿಳಿಸಿದರು.
ತಲೆಬಾಗಬೇಕು ಎಂದು ತಿಳಿಸಿದರು. ಶ್ರೀ ಶಿರಡಿ ಸಾಯಿಬಾಬಾ ಸೇವಾ ಕಲ್ಯಾಣ ಟ್ರಸ್ಟ್‌ನಿಂದ ಪ್ರಥಮ ಬಾರಿಗೆ ಗುರುಪೌರ್ಣಿಮೆ ನಡೆಸುತ್ತಿರುವುದು ಸಂತೋಷದ ವಿಚಾರ. ಸಂಘ-ಸಂಸ್ಥೆಗಳು ನೀ-ನಾ ಎನ್ನುವುದು ಬಿಟ್ಟು ನಾವು ಎಂಬ ಮನೋಭಾವನೆಯೊಂದಿಗೆ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
Related Articles
Advertisement
ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ದಾವಣಗೆರೆ ಶಾಖೆಯಿಂದ ಆರ್.ಎಚ್. ಮಿನಿ ಛತ್ರದಲ್ಲಿ ಮುದ್ರಾ ಶಿರೋಮಣಿ ಎಂದೇಖ್ಯಾತರಾಗಿರುವ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಸಾನ್ನಿಧ್ಯದಲ್ಲಿ ದತ್ತಾತ್ರೇಯ ಹೋಮ, ಸನ್ಮಾನ, ಅನ್ನ ಸಂತರ್ಪಣೆ ನಡೆಯಿತು. ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಾಲಕಿ ಉತ್ಸವ, ಧುನಿ ಪೂಜೆ, ಶೇಜಾರತಿ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶಿವಾಜಿ ನಗರದ ಐರಣಿ ಶಾಖಾ ಮಠದಲ್ಲಿ ಉಪನ್ಯಾಸ ನಡೆಯಿತು. ಹಳೆ ಪಿಬಿ ರಸ್ತೆಯ ಕರೂರು ಕ್ರಾಸ್‌ನಲ್ಲಿರುವ ಶ್ರೀ ಮಾತಾ ಮಾಣಿಕ್ಯೇಶ್ವರಿ ಸುಖಾಶ್ರಮದಲ್ಲಿ ಗುರುಪೌರ್ಣಿಮೆ, ಅಮ್ಮನವರ 85ನೇ ಜಯಂತ್ಯುತ್ಸವ ನಡೆಯಿತು. ಶ್ರೀ ಅಕ್ಕಮಹಾದೇವಿ ಸಮಾಜ. ಬಾಡ ಕ್ರಾಸ್ ಶ್ರೀ ವೀರೇಶ್ವರ ಪುಣ್ಯಾಶ್ರಮ. ಜಯದೇವ ವೃತ್ತದದ ದತ್ತ ಮಂದಿರ, ದೇವರಾಜ ಅರಸು ಬಡಾವಣೆಯ ಸಿ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ, ಕೊಂಡಜ್ಜಿ ರಸ್ತೆಯ ವಿಜಯನಗರ ಬಡಾವಣೆ, ವಿವಿಧ ಶಾಲೆಯಲ್ಲಿ ಗುರುಪೌರ್ಣಿಮೆ ಕಾರ್ಯಕ್ರಮ ನಡೆದವು.