Advertisement

ಕನ್ನಡ ಸಿನಿಮಾ ಸಂಭಾಷಣೆ ಬರಹಗಾರ ಗುರು ಕಶ್ಯಪ್ ನಿಧನ

01:36 PM Sep 14, 2021 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ಸಂಭಾಷಣೆ ಬರಹಗಾರ ಗುರು ಕಶ್ಯಪ್ (45) ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾಗಿದ್ದಾರೆ.

Advertisement

ಹೃದಯಾಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಉಸಿರು ಚೆಲ್ಲಿದ್ದಾರೆ.

ಗುರು ಅವರು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸುಂದರಾಂಗ ಜಾಣ’, ರಮೇಶ್ ಅರವಿಂದ್ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ನಟಿಸಿದ್ದ ‘ದೇವಕಿ’, 2ನೇ ಲಾಕ್ ಡೌನ್ ಗೆ ಮೊದಲು ಬಿಡುಗಡೆಯಾಗಿದ್ದ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.

ಡಾಲಿ ಧನಂಜಯ್ ನಟನೆಯ ‘ಮಾನ್ಸೂನ್ ರಾಗ’, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’, ‘ವೀಲ್ ಚೇರ್ ರೋಮಿಯೋ’ ಮುಂತಾದ ಅನೇಕ ಚಿತ್ರಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆಯುತ್ತಿದ್ದರು.

Advertisement

ಗುರು ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರುಕಶ್ಯಪ್ ಕೂಡ ಒಬ್ಬರು. ಪುಷ್ಪಕ ವಿಮಾನ, ಸುಂದರಾಂಗ ಜಾಣ, 100 ಚಿತ್ರಗಳ dialogue writer..ಸಂಜೆ ನಗುತ್ತಾ normal ಆಗಿ ಇದ್ದವರು ರಾತ್ರಿ ಜೀವ ತೊರದಿದ್ದಾರೆ! ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಠ ಬರಹಗಾರರನ್ನು ಕಳೆದು ಕೊಂಡಿದ್ದೇವೆ ಎಂದು ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಕಂಬಿನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next