Advertisement

ಪಿಲ್ಲರ್‌ಗೆ ಸೀಮಿತ ಗುರುಭವನ

03:22 PM Sep 05, 2020 | Suhan S |

ಶ್ರೀನಿವಾಸಪುರ: ಪಟ್ಟಣದ ಎಂ.ಜಿ.ರಸ್ತೆ ಉತ್ತರ ದಿಕ್ಕಿನಲ್ಲಿ ಗುರುಭವನ ನಿರ್ಮಾಣಕ್ಕೆ ಅಡಿಪಾಯ ಹಾಕಿ, ಪಿಲ್ಲರ್‌ ನಿರ್ಮಿಸಿ 11 ವರ್ಷಗಳಾದ್ರೂ ಕಾಮಗಾರಿ ಈವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ಶಿಕ್ಷಕರು ಖಾಸಗಿ ಕಟ್ಟಡಗಳಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕಿದೆ.

Advertisement

ಶಿಕ್ಷಕರ ಸಾಮರಸ್ಯದ ಕೊರತೆಯೇ ಈ ಗುರುಭವನ ನನೆಗುದಿಗೆ ಬೀಳಲು ಕಾರಣ ಎಂಬ ಆರೋಪಿಗಳು ಕೇಳಿ ಬರುತ್ತಿವೆ. 2009 ಸೆ.17ರಂದು ಅಂದಿನ ಕೇಂದ್ರ ರೈಲ್ವೆ ಸಹಾಯಕ ಸಚಿವರಾಗಿದ್ದ ಕೆ.ಎಚ್‌.ಮುನಿಯಪ್ಪ, ಅಂದು ಕ್ಷೇತ್ರದ ಶಾಸಕರಾಗಿದ್ದಜಿ.ಕೆ.ವೆಂಕಟಶಿವಾರೆಡ್ಡಿ ಸೇರಿದಂತೆ ವೈ.ಎ.  ನಾರಾಯಣಸ್ವಾಮಿ, ಡಾ.ಶಿವ ಯೋಗಿಸ್ವಾಮಿ ಭವನ ನಿರ್ಮಾಣಕ್ಕೆ ಅದ್ಧೂರಿಯಾಗಿ ಶಂಕುಸ್ಥಾಪನೆ ನಡೆಸಿದ್ದರು.

ಅದಾದ ನಂತರ ಗುರುಭವನಕ್ಕೆ ಅಡಿ ಪಾಯ, ಪಿಲ್ಲರ್‌ಗಳನ್ನು ಹಾಕಲಾಯಿತು. ಆದರೆ, ಕಟ್ಟಡ ಕಟ್ಟುವ ಪ್ರಯತ್ನಕ್ಕೆ ಯಾರೂ ಮುಂದಾಗಲೇ ಇಲ್ಲ. ಹಣ, ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆ ಹೀಗೆ ಹಲವು ಕಾರಣಗಳಿಂದ ಕಾಮಗಾರಿ ನನೆಗುದಿಗೆ ಬೀಳುವಂತಾಯಿತು. ಶಿಕ್ಷಕರು ಕೆಲವು ಕಾರ್ಯಕ್ರಮಗಳನ್ನು ನಡೆಸಲು ಅಥವಾ ಶಾಲೆಗಳ ಕೆಲಸ ಮುಗಿದ ನಂತರ ಒಂದಿಷ್ಟು ವಿರಾಮ ಪಡೆಯಲು ಎಲ್ಲೂ ಜಾಗವಿಲ್ಲದೇ ವಾಣಿಜ್ಯ ಸಂಕೀರ್ಣಗಳ ಮುಂದೆ, ಅಶ್ವತ್ಥ ಕಟ್ಟೆಗಳ ಮೇಲೆ ಕುಳಿತು ಕಾಲ ಹಾಕುವಂತಾಗಿದೆ. ಭವನ ಪೂರ್ಣಗೊಳಿಸುವ ಪ್ರಯತ್ನ: ತಾಲೂಕಿನಲ್ಲಿ ಶಿಕ್ಷಕರ ಸಂಘಗಳು ಇದ್ದರೂ ಇಲ್ಲಿ ಕೇವಲ ಶಿಕ್ಷಕರು ಮಾತ್ರ ಎಂದೇ ಜನ ಗೌರವಿಸುವಂತಾಗಿದೆ.

ಶಿಕ್ಷಕರ ಸಂಘಗಳ ನಾಯಕರು ಆಯಾ ಚುನಾವಣಾ ಕಾಲಕ್ಕೆ ಬದಲಾಗುತ್ತಲೇ ಇದ್ದಾರೆ. ಶಿಕ್ಷಕರ ಸಂಘಕ್ಕೆ ಚುನಾವಣೆ ಮುಂದೆ ನಡೆಯಲಿದೆ. ಆದರೂ ಪ್ರಸ್ತುತ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಜಿ. ಎನ್‌.ಗೋವಿಂದರೆಡ್ಡಿ ಅವರು ಗುರು ಭವನ ಪೂರ್ಣಗೊಳಿಸುವ ಪ್ರಯತ್ನ ಮಾಡಲಿದ್ದೇವೆಂಬ ಮಾತನ್ನು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next