Advertisement

ಗುರುಮೂರ್ತಿ ಪ್ರತಿಷ್ಠಾಪನಾ ವಾರ್ಷಿಕ ದಿನಾಚರಣೆ

04:02 PM Sep 05, 2017 | Team Udayavani |

ಮುಂಬಯಿ: ಸಮಾಜವನ್ನು ಸಂಘಟನಾತ್ಮಕವಾಗಿ ಬಲಗೊಳಿಸುವುದು ಕಷ್ಟದ ಕೆಲಸ. ಈ ದಿಸೆಯಲ್ಲಿ ಬಿಲ್ಲವರ ಸಂಘಟನೆಯ ಶಕ್ತಿ ಮೆಚ್ಚುವಂಥದ್ದು, ಕರ್ನಾಟಕದಿಂದ ಬಂದ ನಮಗೆ ಅಲ್ಲಿನ ದೈವಾಂಶ ಶಕ್ತಿ, ಬುದ್ಧಿ ನಮ್ಮನ್ನು ಇಂದು ಹೊರ ರಾಜ್ಯದಲ್ಲಿಯೂ ಪ್ರತಿಷ್ಠಿತ ವ್ಯಕ್ತಿಗಳನ್ನಾಗಿ ರೂಪಿಸಿದೆ ಎಂದು ಉತ್ತರ ಮುಂಬಯಿ ವಲಯದ ಸಂಸದ ಗೋಪಾಲ ಸಿ. ಶೆಟ್ಟಿ ಅವರು ಹೇಳಿದರು.

Advertisement

ಅವರು ಸೆ. 2ರಂದು ಬೊರಿವಲಿ ಪಶ್ಚಿಮದ ಪ್ರಭೋಧನ್ಕರ್‌ ಠಾಕ್ರೆ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಬೊರಿವಲಿ-ದಹಿಸರ್‌ ಸ್ಥಳೀಯ ಸಮಿತಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರು ಮೂರ್ತಿ ಪ್ರತಿಷ್ಠಾಪನೆಯ 9ನೇ ವಾಷಿರಕ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಮಾತನಾಡುತ್ತಿದ್ದರು.

ಸಮಾಜದಲ್ಲಿನ ಸಂಘಟನೆಯಲ್ಲಿ ಯಶಸ್ವಿ ಕಾಣಬೇಕಾದಲ್ಲಿ ನಮ್ಮ ಯೋಜನೆಯ ಕಾರ್ಯಕ್ರಮಗಳು ಸೀಮಿತ ಮಟ್ಟಕ್ಕಿದ್ದು, ಅದನ್ನು ಯೋಜನಾತ್ಮಕವಾಗಿ ಜಾರಿಗೊಳಿಸಿದಾಗ ಎಲ್ಲಾ ವರ್ಗದ ಜನರಿಗೆ ಲಾಭದಾಯಕವಾಗುವುದು. ಈ ಮೂಲಕ ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಿನ ಪ್ರತಿರೂಪವಾಗಿ ಕೆಲಸ ಮಾಡಬೇಕು. ತಳಮಟ್ಟದಿಂದ  ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪುಗೊಳಿಸುವ ಮೂಲಕ ಪ್ರತಿಯೊಬ್ಬರೂ ವಿವಿಧ ವೇದಿಕೆಯಲ್ಲಿ ಮುಂದುವರಿಯಲು ಸಾಧ್ಯ ಎಂದು ಅವರು ನುಡಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಬಿಲ್ಲವ ಛೇಂಬರ್ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ಅವರು ಮಾತನಾಡಿ, ಸ್ವಜಾತಿ ಬಾಂಧವರೆಲ್ಲ ಒಗ್ಗೂಡುವುದು ಒಂದು ಸಂಭ್ರಮದ ಸಮಯ. ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂತಹ ವೇದಿಕೆಗಳು ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೂ ಅವಕಾಶ ಒದಗಿಸಿದಂತಾಗುತ್ತದೆ. ವಿವಿಧ ಸ್ಥಳೀಯ ಸಮಿತಿಗಳು ಮಹಾನಗರದಲ್ಲಿ ಇನ್ನಷ್ಟು ತಮ್ಮ ಕಾರ್ಯ ಚಟುವಟಿಕೆಗಳನ್ನು ವೃದ್ಧಿಸುವ ಮೂಲಕ ಊರಿನ ಬಿಲ್ಲವರ ಏಳಿಗೆಗಾಗಿ ದುಡಿದು ಅವರನ್ನು ಮೇಲ್ಪಂಕ್ತಿಗೆ ತರುವ ಕಾರ್ಯವನ್ನು ಮಾಡಬೇಕು. ಜೊತೆಗೆ, ಬಿಲ್ಲವರು ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯಲು ತಾವೆಲ್ಲರೂ ಸಂಘಟಿತರಾಗಿ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಗೌರವಾಧ್ಯಕ್ಷ ಮಾಜಿ ಉಪ ಪೊಲೀಸ್‌ ಆಯುಕ್ತರಾದ ಡಾ| ಸುಧಾಕರ್‌ ಪೂಜಾರಿ ಅವರು ಮಾತನಾಡುತ್ತ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯಲ್ಲಿ ಅದ್ಭುತ ಸಾಧನೆಗೈಯ್ಯಲು ಜಯ ಸುವರ್ಣ ಅವರಂತಹ ಛಲವಾದಿ, ಗೌರವಾನ್ವಿತ ವ್ಯಕ್ತಿಯಿಂದ ಸಾಧ್ಯವಾಗಿದೆ. ಜೊತೆಗೆ ಈಗಿನ ಉತ್ಸಾಹಿ ಅಧ್ಯಕ್ಷರಾದ  ನಿತ್ಯಾನಂದ ಡಿ. ಕೋಟ್ಯಾನ್‌ ಸಂಸ್ಥೆಯನ್ನು ಸಮರ್ಥವಾಗಿ ಕೊಂಡೊಯ್ಯತ್ತಿದ್ದಾರೆ. ಬಿಲ್ಲವರ ಯುವಕರು ಇಂದು ಕೂಟ ಉನ್ನತ ಮಟ್ಟದ ಐಎಎಸ್‌, ಐಪಿಎಸ್‌ ಹುದ್ದೆಗಳಿಂದ ವಂಚಿತರಾಗಿದ್ದು, ಮುಂದೆ ಶಿಕ್ಷಣಾರ್ಥಿ ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಬೇಕು ಎಂದರು.

Advertisement

ಕಾರ್ಯಕ್ರಮದ ಪ್ರಾರಂಭದಲ್ಲಿ  ಮಹಿಳಾ ಸದಸ್ಯರು ನಾರಾಯಣ ಗುರು ಸ್ಮರಣೆಯ ಪ್ರಾರ್ಥನೆ ಹಾಡಿದರು. ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಘದ ಕಾರ್ಯಾಧ್ಯಕ್ಷ ಎಂ. ಸುಂದರ್‌ ಪೂಜಾರಿ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಶ್ರೀಧರ್‌ ವಿ. ಬಂಗೇರ,  ಜೊತೆ ಕಾರ್ಯದರ್ಶಿ ಅಶೋಕ್‌ ಜಿ. ಸಾಲ್ಯಾನ್‌, ಉಪ ಕಾರ್ಯಾಧ್ಯಕ್ಷ ಕೃಷ್ಣರಾಜ್‌ ಸುವರ್ಣ ಗಣ್ಯರನ್ನು ಪರಿಚಯಿಸಿದರು.

ಉಪಾಧ್ಯಕ್ಷರಾದ ಶಂಕರ್‌ ಡಿ. ಪೂಜಾರಿ, ಪುರುಷೋತ್ತಮ ಕೋಟ್ಯಾನ್‌,  ಕೇಂದ್ರ ಕಚೇರಿಯ ಗೌರವ ಕೋಶಾಧಿಕಾರಿ ಮಹೇಶ್‌ ಕಾರ್ಕಳ ಅತಿಥಿ ಗಣ್ಯರನ್ನು ಗೌರವಿಸಿದರು.

ವೇದಿಕೆಯಲ್ಲಿ ಕೇಂದ್ರ ಕಚೇರಿಯ ಜೊತೆ ಕಾರ್ಯದರ್ಶಿ ಪ್ರೇಮನಾಥ ಪಿ. ಕೋಟ್ಯಾನ್‌, ಭಾರತ್‌ ಕೋ ಆಪರೇಟಿವ್‌ ಬ್ಯಾಂಕಿನ ನಿರ್ದೇಶಕರಾದ ದಾಮೋದರ್‌ ಸಿ. ಕುಂದರ್‌, ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್‌ ಉಪಸ್ಥಿತರಿದ್ದರು.

ಜೊತೆ ಕೋಶಾಧಿಕಾರಿ ಸುರೇಶ್‌ ಡಿ. ಸನಿಲ್‌, ಕಾರ್ಯಕಾರಿ ಸಮಿತಿಯ ದಯಾನಂದ ಪೂಜಾರಿ, ಆರ್‌. ಎಸ್‌. ಕೋಟ್ಯಾನ್‌, ವತ್ಸಲಾ ಕೆ. ಪೂಜಾರಿ, ಎಸ್‌. ಚಂದ್ರಹಾಸ್‌ ಸುವರ್ಣ, ಪಿ. ಎ. ಪೂಜಾರಿ, ಭಾರತಿ ಅಮೀನ್‌, ರಾಘು ಜಿ. ಪೂಜಾರಿ, ರತ್ನ ಯು. ಪೂಜಾರಿ ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಿತಿಯ ಸದಸ್ಯರಿಂದ ಹಾಸ್ಯ ಪ್ರಹಸನ ಹಾಗೂ ಕೇವೀಸ್‌ ಎಂಟರ್‌ಟೈನ್‌ಮೆಂಟ್‌ ಮುಂಬಯಿ ಅವರಿಂದ “ಈ ರಾತ್ರೆಗ್‌ ಪಗೆಲ್‌Y ಯಾನ್‌’ ತುಳು ಹಾಸ್ಯಮಯ  ನಾಟಕವು ಕೃಷ್ಣರಾಜ್‌ ಶೆಟ್ಟಿ ಮುಂಡ್ಕೂರು ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು.

ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿದರು. ಕೇಂದ್ರ ಕಚೇರಿಯ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ಮೋಹನ್‌ ಬಿ. ಅಮೀನ್‌ ವಂದಿಸಿದರು. 

  ಬಿಲ್ಲವರು ಪ್ರತಿ ಸಂದರ್ಭದಲ್ಲೂ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ತಮ್ಮ ಸಂಘಟನಾ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದೇ ಮನೋಭಾವದಿಂದ ನಾವೆಲ್ಲರೂ ಒಗ್ಗಟ್ಟನ್ನು ಬಲಪಡಿಸುವ ಮೂಲಕ ಗುರು ತಣ್ತೀಕ್ಕೆ ಪ್ರೇರಣೆಯಾಗೋಣ. ಪ್ರತಿಯೊಂದು ಸಂದರ್ಭದಲ್ಲಿ ನಮ್ಮ ಕಾರ್ಯಕ್ರಮಗಳಲ್ಲಿ ವೈವಿಧ್ಯವನ್ನು ತೋರ್ಪಡಿಸುವ ಜತೆಗೆ ಎಲ್ಲಾ ಸಮಾಜ ಬಾಂಧವರನ್ನು  ಒಗ್ಗಟ್ಟಿನಿಂದ ಸಮಾಜದ ವೇದಿಕೆಗೆ ತರಬೇಕು. ಜಯ ಸಿ. ಸುವರ್ಣ ಅವರ ಚಿಂತನೆಯನ್ನು ನಾವೆಲ್ಲರೂ ಗೌರವಿಸಬೇಕು
   – ನಿತ್ಯಾನಂದ ಡಿ. ಕೋಟ್ಯಾನ್‌, ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next