ಗುರುಗ್ರಾಮ್ : ಆಗಸ್ಟ್‌ನಲ್ಲಿ ಸಾಕು ನಾಯಿಯ ದಾಳಿಯಿಂದ ಗಾಯಗೊಂಡ ಮಹಿಳೆಗೆ 2 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಂಗಳವಾರ ಗುರುಗ್ರಾಮ್ ಮಹಾನಗರ ಪಾಲಿಕೆಗೆ (ಎಂಸಿಜಿ) ಆದೇಶಿಸಿದೆ.
ಮಹಾನಗರ ಪಾಲಿಕೆ ಬಯಸಿದರೆ, ಈ ಪರಿಹಾರದ ಮೊತ್ತವನ್ನು ನಾಯಿ ಮಾಲೀಕರಿಂದ ವಸೂಲಿ ಮಾಡಬಹುದು ಎಂದು ವೇದಿಕೆ ಹೇಳಿದೆ.
ಕಳೆದ ಆಗಸ್ಟ್ 11 ರಂದು, ಸಂತ್ರಸ್ತ ಮಹಿಳೆ ತನ್ನ ಅತ್ತಿಗೆಯೊಂದಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ನೆರೆಮನೆಯ ನಾಯಿ ಮಹಿಳೆಯ ಮೇಲೆ ದಾಳಿ ಮಾಡಿತ್ತು. ಈ ವೇಳೆ ಆಕೆಗೆ ಮುಖ ಮತ್ತು ದೇಹದ ಭಾಗಗಳಿಗೆ ಗಂಭೀರ ಗಾಯಗಳಾದ್ದು ಗುರುಗ್ರಾಮ್‌ನ ಸಿವಿಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಾಯಿ ದಾಳಿ ಕುರಿತು ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ಸಾಕು ನಾಯಿಗಳಿಗೆ ನೀತಿ ರೂಪಿಸುವಂತೆ ಎಂಸಿಜಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ನಿರ್ದೇಶನ ನೀಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ನಾಯಿಯ ಮಾಲೀಕರು ದೇಶದ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಮತ್ತು ನಿಷೇಧಿತ ತಳಿಯನ್ನು ಸಾಕು ನಾಯಿಯಾಗಿ ಸಾಕಿದ್ದಕ್ಕಾಗಿ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮನೆಕೆಲಸ ಮಾಡಿಕೊಂಡಿದ್ದ ಬಡ ಸಂತ್ರಸ್ತ ಮಹಿಳೆಗೆ ಎಂಸಿಜಿಯಿಂದ ಮಧ್ಯಂತರ ಪರಿಹಾರದ ಮೂಲಕ 2 ಲಕ್ಷ ರೂಗಳನ್ನು ಪರಿಹಾರವಾಗಿ ಪಾವತಿಸಲು ಆದೇಶಿಸಿದೆ.
ಇದನ್ನೂ ಓದಿ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧೆ