ನವದೆಹಲಿ: ಗಂಡ, ಹೆಂಡತಿ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ 39 ವರ್ಷದ ಇಂಜಿನಿಯರ್ ಪತಿಯನ್ನು ಪತ್ನಿ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲಿ ದಂಪತಿಯ ಇಬ್ಬರು ಮಕ್ಕಳು ಕೂಡಾ ಮನೆಯಲ್ಲಿದ್ದು, ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಪತ್ನಿ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ನಿಯಂತ್ರಣ ತಪ್ಪಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ:ಓರ್ವ ಸಾವು
ಪ್ರತಿದಿನ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಶುಕ್ರವಾರ(ಜೂನ್ 18) ಸಚಿನ್ ಕುಮಾರ್ ಕೊಲೆಯಾಗಲು ಇದೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಕುಮಾರ್ ಎದೆಗೆ ಪತ್ನಿ ಚೂರಿಯಿಂದ ಇರಿದಿರುವುದಾಗಿ ವರದಿ ತಿಳಿಸಿದೆ.
ಗುರ್ಗಾಂವ್ ನ ಜ್ಯೋತಿ ಪಾರ್ಕ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ದಂಪತಿ ನಡುವೆ ಜಗಳ ನಡೆದಾಗ, ಪತ್ನಿ ಚೂರಿಯಿಂದ ಪತಿಗೆ ಇರಿದ ಪರಿಣಾಮ ಸಾವು ಸಂಭವಿಸಿದೆ. ಐಪಿಸಿ ಸೆಕ್ಷನ್ ಪ್ರಕಾರ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಕ್ರೈಂ ಬ್ರ್ಯಾಂಚ್ ಎಸ್ಪಿ ಪ್ರೀತ್ಪಾಲ್ ಸಿಂಗ್ ತಿಳಿಸಿದ್ದಾರೆ.
ಸಚಿನ್ ಕುಮಾರ್ ಸಹೋದರ ತನ್ನ ಅತ್ತಿಗೆ ಗುಂಜನ್ ಕುಮಾರ್ ವಿರುದ್ಧ ದೂರು ನೀಡಿದ್ದು, ಅದರಂತೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಚಿನ್ ಸಹೋದರಿ ರೇಷ್ಮಾ ತಿಳಿಸಿದ್ದಾಳೆ.