Advertisement

ಕರ್ತಾರ್‌ಪುರ ಕಾರಿಡಾರ್‌ ಕಾಮಗಾರಿ ಪ್ರಗತಿ ವೀಕ್ಷಿಸಿದ ಸಂಸದ ಸನ್ನಿ ದೇವಲ್‌

09:20 AM Jun 18, 2019 | Sathish malya |

ಗುರುದಾಸ್‌ಪುರ : ಗುರುದಾಸ್‌ಪುರ ಸಂಸದ ಮತ್ತು ಬಾಲಿವುಡ್‌ ನಟ ಸನ್ನಿ ದೇವಲ್‌ ಇಂದು ಶನಿವಾರ ಡೇರಾ ಬಾಬಾ ನಾನಕ್‌ ನಲ್ಲಿನ ಕರ್ತಾರ್‌ಪುರ ಕಾರಿಡಾರ್‌ ಕಾಮಗಾರಿ ಪ್ರಗತಿ ವೀಕ್ಷಿಸಿದರು.

Advertisement

ತಾನು ಕಾಮಗಾರಿ ಪ್ರಗತಿ ವೀಕ್ಷಿಸುವ ಫೋಟೋಗಳನ್ನು ಸನ್ನಿ ದೇವಲ್‌ ತನ್ನ ಟ್ವಿಟರ್‌ ಖಾತೆಗೆ ಅಪ್‌ ಲೋಡ್‌ ಮಾಡಿದ್ದಾರೆ.

59ರ ಹರೆಯದ ಬಿಜೆಪಿ ಸಂಸದ ಸನ್ನಿ ಲೋಕಸಭೆಗೆ ಗೆದ್ದು ಬಂದ ಬಳಿಕ ಮೊದಲ ಬಾರಿಗೆ ಕರ್ತಾರ್‌ಪುರ ಕಾರಿಡಾರ್‌ ನಿವೇಶನಕ್ಕೆ ಭೇಟಿ ನೀಡಿದ್ದಾರೆ.

ದೇವಲ್‌ ಜತೆಗೆ ಜಿಲ್ಲಾಡಳಿತೆಯ ಅಧಿಕಾರಿಗಳು, ಬಿಎಸ್‌ಎಫ್ ಸಿಬಂದಿಗಳು ಮತ್ತು ಇತರರು ಡೇರಾ ಬಾಬಾ ನಾನಕ್‌ ನಲ್ಲಿದ್ದರು. ಆದರೆ ಅವರೆಲ್ಲ ಅರ್ಧ ತಾಸು ಮಾತ್ರವೇ ದೇವಲ್‌ ಜತೆಗೆ ಉಳಿದಿದ್ದರು ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next