ಬರ್ಲಿನ್ : ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ಕ್ಲಬ್‌ನ ಫುಟ್‌ಬಾಲ್ ಲೆಜೆಂಡ್ ಗರ್ಡ್ ಮುಲ್ಲರ್ (75) ರವಿವಾರ ನಿಧನ ಹೊಂದಿದರು. ಇದರೊಂದಿಗೆ ವಿಶ್ವ ಫುಟ್‌ಬಾಲ್‌ನ ಮಹೋನ್ನತ ಅಧ್ಯಾಯವೊಂದು ಕೊನೆಗೊಂಡಿತು.
ಗರ್ಡ್ ಮುಲ್ಲರ್ ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಗೋಲ್ ಸ್ಕೋರರ್‌ಗಳಲ್ಲಿ ಒಬ್ಬರಾ ಗಿದ್ದು, 62 ಅಂತಾರಾಷ್ಟ್ರೀಯ ಪಂದ್ಯಗಳಿಂದ 68 ಗೋಲು ಸಿಡಿಸಿದ್ದಾರೆ.
1974ರ ಜರ್ಮನಿಯ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಲ್ಲಿ ಮುಲ್ಲರ್ ಕೂಡ ಒಬ್ಬರು. ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯಧಿಕ ಗೋಲು ಸಾಧಕರಲ್ಲಿ ಮುಲ್ಲರ್‌ಗೆ ಮೂರನೇ ಸ್ಥಾನ (14). ಕ್ರಿಸ್ಟಿಯಾನೊ ರೊನಾಲ್ಡೊ (15) ಮತ್ತು ಮಿರೋಸ್ಲಾವ್ ಕ್ಲೋಸ್ (16) ಸಾಧನೆಗೂ ಮುನ್ನ ಮುಲ್ಲರ್ ಅವರೇ ಬಹಳಷ್ಟು ವರ್ಷಗಳ ಕಾಲ ಅಗ್ರಸ್ಥಾನ ಅಲಂಕರಿಸಿದ್ದರು.
1964ರಲ್ಲಿ ಬೇಯರ್ನ್ ಪರ ಆಡತೊಡಗಿದ ಮುಲ್ಲರ್, ಕ್ಲಬ್ ಇತಿಹಾಸದಲ್ಲಿ ಸರ್ವಾಧಿಕ 566 ಗೋಲುಗಳ ದಾಖಲೆ ನಿರ್ಮಿಸಿದ್ದಾರೆ. ಆಡಿದ ಪಂದ್ಯಗಳ ಸಂಖ್ಯೆ 607.
ಇದನ್ನೂ ಓದಿ :ವಿದೇಶಗಳಲ್ಲೂ ಸ್ವಾತಂತ್ರ್ಯ ಸಂಭ್ರಮ : ಭಾರತಕ್ಕೆ ಶುಭ ಹಾರೈಕೆ
ಬೇಯರ್ನ್ ಕ್ಲಬ್ ಸಂತಾಪ
“ಇಂದು ಬೇಯರ್ನ್ ಮತ್ತು ಈ ಕ್ಲಬ್‌ನ ಎಲ್ಲ ಅಭಿಮಾನಿಗಳ ಪಾಲಿಗೆ ದುಃಖದ ದಿನ. ಬ್ಲ್ಯಾಕ್ ಡೇ. ಗರ್ಡ್ ಮುಲ್ಲರ್ ಗ್ರೇಟೆಸ್ಟ್ ಸ್ಟ್ರೈಕರ್ ಆಗಿದ್ದರು. ಇದಕ್ಕಿಂತ ಮಿಗಿಲಾಗಿ ಉನ್ನತ ವ್ಯಕ್ತಿಯಾಗಿದ್ದರು’ ಎಂಬುದಾಗಿ ಬೇಯರ್ನ್ ಅಧ್ಯಕ್ಷ ಹರ್ಬರ್ಟ್ ಹೈನರ್ ಸಂತಾಪ ಸೂಚಿಸಿದ್ದಾರೆ.