ಕಲಾದಗಿ: ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ, ಹಳ್ಳ ಕೊಳ್ಳ ತಿರಗ್ಯಾಡಿ ಬಂದಿ, ಕಾರ್ ಮಳಿಯೇ ಕಪಾಟ ಮಳಿಯೇ, ಬೇಗನ ಬಾರ ಸುರಿಯೇ ಮಳಿಯೇ..!
ಏನಿದು ಗುರ್ಚಿ ಪೂಜೆ: ಓರ್ವ ಬಾಲಕ ಅಥವಾ ಬಾಲಕಿಯ ತಲೆ ಮೇಲೆ ತೆವಿ (ರೊಟ್ಟಿ ಮಾಡು ಹಂಚು)ಯನ್ನು ಉಲಾr (ಡಬ್ಬ) ಹಾಕಿಕೊಂಡು ಆ ತೆವಿ ಮೇಲೆ ಮಣ್ಣಿನ ಮುದ್ದೆ ಇಟ್ಟುಕೊಂಡು, ಹಸಿ ಮಣ್ಣಿಯ ಮುದ್ದೆಯ ಮೇಲೆ ಕರಿಕೆ ಹುಲ್ಲು ಹಾಕಿ, ಮನೆಯ ಮನೆಯ ಮುಂದೆ ಹೋಗಿ ಹಾಡು ಹಾಡುತ್ತಾರೆ. ಈ ವೇಳೆ ಮಹಿಳೆಯರು ಮಕ್ಕಳು ಗುರ್ಚಿಯ ಮೇಲೆ ನೀರು ಸುರಿಯುತ್ತಾರೆ. ಆಗ ಗುರ್ಚಿಯು ತಂಪಾಗಿ ಮಳೆ ಬರುತ್ತದೆ ಎಂದು ನಂಬಿಕೆಯಿದೆ.
ಗ್ರಾಮದ ಗಡ್ಡಿಓಣಿಯ ವಿಶ್ವನಾಥ ಹಣಜಿ ಬಾಲಕ ತಲೆಯ ಮೇಲೆ ಗುರ್ಚಿ ಹೊತ್ತು, ಮಹಿಳೆಯರು ಇಂತಹ ಗುರ್ಚಿಯನ್ನು ಮಾಡಿ ಓಣಿಯಯಲ್ಲಿ ಮನೆ ಮನೆ ಮುಂದೆ ಬಂದಾಗ ಮನೆಯವರು ತಂಬಿಗೆ, ಸಣ್ಣ ಪಾತ್ರೆಯ ತುಂಬಾ ನೀರು ತಂದು ಗುರ್ಚಿಯ ಮೇಲೆ ಸುರಿಯಲಾರಂಭಿಸುತ್ತಾರೆ.ಗುರ್ಚಿ ಹೊತ್ತ ಬಾಲಕ ಓಣಿಯಲ್ಲಿ ತಿರುಗಾಡಿ ಗುರ್ಚಿ ಮೇಲೆಯ ನೀರನ್ನು ಹಾಕಿಸಿಕೊಂಡು ಆ ಮನೆಯವರಿಂದ ದವಸ ಧಾನ್ಯ ನೀಡಿದ್ದನ್ನು ಪ್ರಸಾದವಾಗಿ ತಯಾರಿಸಿ ಮನೆ ಮಂದಿಗೆ ಕೊಡುವ ವಿಶಿಷ್ಟ ಗುರ್ಚಿ ಪೂಜೆ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಯಿತು.
Advertisement
ಹೀಗೆ ಜನಪದ ದಾಟಿಯಲ್ಲೇ ಹಾಡುತ್ತಾ ಗ್ರಾಮದ ವಿವಿಧ ಓಣಿಯಲ್ಲಿ ಸುತ್ತಾಡಿ ವಿಶಿಷ್ಟ ಗುರ್ಚಿ ಪೂಜೆ ಆಚರಣೆ ಮಾಡಿ ಮಳೆಗಾಗಿ ಮಕ್ಕಳು ಮಹಿಳೆಯರು, ಯುವಕರು ಪ್ರಾರ್ಥಿಸಿ ಪೂಜಿಸಿದರು.