Advertisement

ಜಡ್ಜ್ ಮನೆ ಮೇಲೆ ದಾಳಿ

10:35 AM Apr 16, 2018 | Team Udayavani |

ಲಾಹೋರ್‌: ಪಾಕ್‌ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಮನೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂಬಂಧ ಪಾಕಿಸ್ಥಾನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

Advertisement

ಲಾಹೋರ್‌ನಲ್ಲಿರುವ ನ್ಯಾ| ಐಜಾಝ್ ಉಲ್‌ ಆಶಾನ್‌ ನಿವಾಸದ ಮೇಲೆ ರವಿವಾರ ಮುಂಜಾನೆ 4.30 ಮತ್ತು 9 ಗಂಟೆಗೆ ಒಟ್ಟು 2 ಬಾರಿ ಗುಂಡಿನ ದಾಳಿ ನಡೆದಿದೆ. ತನಿಖೆ ನಡೆಯುತ್ತಿದ್ದು, ಮುಖ್ಯ ನ್ಯಾಯಾಧೀಶರೇ ಈ ತನಿಖೆಯ ಮೇಲ್ವಿಚಾರಣೆ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next