ಟೊರಾಂಟೋ : ಕೆನಡ ರಾಜಧಾನಿ ಟೊರಾಂಟೋದಲ್ಲಿ ನಿನ್ನೆ ಭಾನುವಾರ ರಾತ್ರಿ (ಸ್ಥಳೀಯ ಕಾಲಮಾನ) ಬಂದೂಕುಧಾರಿಯೋರ್ವರ ಜನರು ಮೇಲೆ ಯದ್ವಾತದ್ವಾ ಗುಂಡು ಹಾರಿಸಿದ ಕಾರಣ ಕನಿಷ್ಠ 9 ಮಂದಿ ಗಾಯಗೊಂಡರು.
ಒಡನೆಯೇ ಕಾರ್ಯಾಚರಣೆ ನಡೆಸಿದ ಜಾಗೃತ ಪೊಲೀಸರು ಬಂದೂಕುಧಾರಿಯನ್ನು ಗುಂಡಿಕ್ಕಿ ಕೊಂದರು. ಈತ ಭಯೋತ್ಪಾದಕನೇ, ಮತಿ ಭ್ರಮಿತ ಹುಚ್ಚು ದುಸ್ಸಾಹಸಿಯೇ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಈಗ ತನಿಖೆ ನಡೆಯುತ್ತಿದೆ.
ಟೊರಾಂಟೋ ಸ್ಟಾರ್ ವರದಿಯ ಪ್ರಕಾರ ಬಂದೂಕುಧಾರಿಯು ಕಪ್ಪು ಬಟ್ಟೆಗಳನ್ನು ತೊಟ್ಟಿದ್ದ ಮತ್ತು ಜನ ಸಮೂಹದ ಮೇಲೆ 15ರಿಂದ 20 ಸುತ್ತು ಗುಂಡು ಹಾರಿಸಿದ. ಇದರಿಂದಾಗಿ ಕನಿಷ್ಠ 9 ಮಂದಿ ಗಾಯಗೊಂಡರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು.
ಬಂದೂಕುಧಾರಿ ಹುಚ್ಚಾಪಟ್ಟೆ ಗುಂಡೆಸೆತದಿಂದ ಜನರನ್ನು ರಕ್ಷಿಸಲು ಪೊಲೀಸರು ಒಡನೆಯೇ ಒಂದು ಬಸ್ಸನ್ನು ಬಳಸಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು ಎಂದು ವರದಿ ತಿಳಿಸಿದೆ.
ಟ್ವಿಟರ್‌ನಲ್ಲಿ ಈ ಘಟನೆಯ ವಿಡಿಯೋವನ್ನು ಶೇರ್ ಮಾಡಲಾಗಿದ್ದು ಬಂದೂಕುಧಾರಿಯು ಗುಂಡೆಸೆದ ಸದ್ದು ಕೇಳಿ ಬರುತ್ತಿತ್ತು ಮತ್ತು ಪೊಲೀಸರು ರಸ್ತೆ ತುಂಬ ಓಡುತ್ತಿದ್ದುದು ಕಂಡು ಬಂದಿದೆ.
ಬಂದೂಕುಧಾರಿಯ ದಾಳಿಯನ್ನು ಅನುಸರಿಸಿ ಕೂಡಲೇ ಇಡಿಯ ಪ್ರದೇಶವನ್ನು ಪೊಲೀಸರು ಸುತ್ತುವರಿದರು.