ಗುಂಡ್ಲುಪೇಟೆ(ಚಾಮರಾಜನಗರ): ವೈಯಕ್ತಿಕ ದ್ವೇಷದಿಂದ ಚಾಕುವಿನಿಂದ ಇರಿದು ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಪಟ್ಟಣದ ಅರಳಿಕಟ್ಟೆ ಬೀದಿಯಲ್ಲಿ ಸೋಮವಾರ ಸಂಜೆ ನಡೆದಿದೆ.
Advertisement
ಪಟ್ಟಣದ ಸಂಜಯ್(24) ಕೊಲೆಯಾದ ಮೃತ ಯುವಕನಾಗಿದ್ದು, ಈತನ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿರುವ ಯುವಕ ಅಭಿ(21) ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ
ಹತ್ಯೆಯಾದ ಯುವಕನ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.