Advertisement

Gundlupete; ರೈಲ್ವೇ ಬ್ಯಾರಿಕೇಡ್ ನಲ್ಲಿ ಸಿಲುಕಿದ ಕಾಡಾನೆ ರಕ್ಷಣೆ

06:02 PM Sep 01, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ರೈಲ್ವೇ ಬ್ಯಾರಿಕೇಡ್ ನಲ್ಲಿ ಸಿಲುಕಿದ್ದ ಕಾಡಾನೆಯೊಂದನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾವಿನಹಳ್ಳ ಎಂಬಲ್ಲಿ ನಡೆದಿದೆ.

Advertisement

ಆಹಾರ ಅರಸಿ ಕಾಡಿನಿಂದ ಹೊರ ಬರಲು ಎರಡು ಆನೆಗಳು ಯತ್ನಿಸಿದ್ದ ವೇಳೆ ಘಟನೆ ನಡೆದಿದೆ.

ಒಂದು ಆನೆಯು ಸರಾಗವಾಗಿ ಬ್ಯಾರಿಕೇಡ್ ದಾಟಿದ್ದು, ಮತ್ತೊಂದು ಸುಮಾರು 45 ವರ್ಷದ ಗಂಡಾನೆ ಹೊರ ಬರುವ ವೇಳೆ ರೈಲ್ವೇ ಬ್ಯಾರಿಕೇಡ್‍ಗೆ ಸಿಲುಕಿಕೊಂಡಿದೆ. ಮಾಹಿತಿ ಅರಿತ ಮದ್ದೂರು ವಲಯದ ಆರ್ ಎಫ್‍ಓ ಪುನೀತ್ ನೇತೃತ್ವದ ತಂಡ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬ್ಯಾರಿಕೇಡ್‍ಗಳನ್ನು ಸಡಿಲಗೊಳಿಸಿ ಆನೆಯು ಹೊರ ಬರುವಂತೆ ಮಾಡಿ ಬಚಾವ್ ಮಾಡಿದ್ದಾರೆ.

ಈ ಸಂಬಂಧ ಆರ್ ಎಫ್‍ಓ ಪುನೀತ್ ಪ್ರತಿಕ್ರಿಯೆ ನೀಡಿ, ಆನೆಯು ಬ್ಯಾರಿಕೇಡ್ ದಾಟುವ ವೇಳೆ ಅಡಿಯಲ್ಲಿ ಸಿಲುಕಿಕೊಂಡಿದೆ. ಕೂಡಲೇ ಎಚ್ಚೇತ್ತು ಅರಣ್ಯ ಸಿಬ್ಬಂದಿಗಳೊಂದಿಗೆ ವಿವಿಧ ಸಲಕರಣೆಗಳ ಸಮೇತ ತೆರಳಿ ಕಾಡಾನೆಯನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಆನೆಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದರ ಚಲನ ವಲನಗಳ ಮೇಲೆ ನಿಗಾ ಇರಿಸಲಾಗಿದ್ದು, ಆರೋಗ್ಯದಿಂದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next