ಕುಂದಾಪುರ: ಗುಲ್ವಾಡಿ ಗ್ರಾ.ಪಂ. ಆಡಳಿತವು ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಪ್ರತಿ ವರ್ಷವೂ ಇಲ್ಲಿನ ಜನರು ನೀರಿಗಾಗಿ ಪ್ರತಿಭಟಿಸಬೇಕಾಗಿದೆ. ಇಲ್ಲಿ ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಮಾಡಲು ಬೈಂದೂರು ಶಾಸಕರು ಮುಂದಾಗುವಂತೆ ಒತ್ತಡ ತರಬೇಕು ಎಂದು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದರು.
ಗುಲ್ವಾಡಿ ಗ್ರಾಮಸ್ಥರು ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಸಿಪಿಎಂ ಗುಲ್ವಾಡಿ ಶಾಖೆಗಳ ನೇತೃತ್ವದಲ್ಲಿ ಮಾ. 16ರಂದು ಗಾ.ಪಂ. ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿಪಿಎಂ ಮುಖಂಡ ಎಚ್. ನರಸಿಂಹ ಮಾತನಾಡಿ, ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಬಡ ನಿವೇಶನ ರಹಿತರು ನಿವೇಶನ ಕೋರಿ ಅರ್ಜಿ ಸಲ್ಲಿಸಿದವರಿಗೆ ಜಾಗ ಗುರುತಿಸಿ ಸಂಬಂಧಪಟ್ಟ ಕಂದಾಯ ಇಲಾಖೆಗೆ ನೀಡದಿರುವುದು ಖಂಡನೀಯ ಎಂದರು. ಸಿಪಿಎಂ ಜಿಲ್ಲಾ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿದರು.
ಗುಲ್ವಾಡಿ ಬೋಳ್ ಕಟ್ಟೆಯಿಂದ ಹೊರಟ ಪ್ರತಿಭಟನಕಾರರು ಹಕ್ಕೊತ್ತಾಯದ ಬೇಡಿಕೆಗಳ ಮನವಿಯನ್ನು ಪಿಡಿಒ ಚಂದ್ರಕಾಂತ್ ಮತ್ತು ಉಪಾಧ್ಯಕ್ಷ ಮಹಮ್ಮದ್ ಜಿ. ಅವರಿಗೆ ಸಲ್ಲಿಸಿತು. ಪ್ರತಿಭಟನೆಯ ನೇತೃತ್ವವನ್ನು ಸಿಪಿಎಂ ಸ್ಥಳೀಯ ಶಾಖಾ ಕಾರ್ಯದರ್ಶಿ ಅಣ್ಣಪ್ಪ ಅಬ್ಬಿಗುಡ್ಡಿ, ಮಾಜಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ಮಡಿವಾಳ, ಜಿ.ಬಿ. ಮಹಮ್ಮದ್,ಅಣ್ಣಪ್ಪ ಶೇರಿಗಾರ್, ಚಂದ್ರ ಗ್ರೀನ್ ಲ್ಯಾಂಡ್, ಕಟ್ಟಡ ಸಂಘದ ಮುಖಂಡ ರೊನಾಲ್ಡ… ರಾಜೇಶ್ ವಹಿಸಿದ್ದರು. ಪಕ್ಷದ ವಲಯ ಸಮಿತಿ ಮುಖಂಡ ಜಿ.ಡಿ. ಪಂಜು ಸ್ವಾಗತಿಸಿ,ರಮೇಶ್ ಗುಲ್ವಾಡಿ ವಂದಿಸಿದರು.