Advertisement

ಮಧುವಣಗಿತ್ತಿಯಂತೆ ಸಿಂಗಾರಗೊಂಡ “ಗುಲ್‌ಮೊಹರ್‌’

03:55 PM May 24, 2023 | Team Udayavani |

ಉಡುಪಿ: ರಂಗು ರಂಗಿನ ತರಹೇವಾರಿ ಹೂ ಗಳ ಸೌಂದರ್ಯ ನೋಡುವುದು ವಿಶಿಷ್ಟ ಆನಂದ. ಇಂತಹ ನಿಸರ್ಗದ ಸೊಬಗನ್ನು ಉಡುಪಿಯಲ್ಲೂ ಕಾಣಬಹುದು. ನಗರದ ಅಂದವನ್ನು ಗುಲ್‌ಮೊಹರ್‌ ಹೂಗಳು ಹೆಚ್ಚಿಸಿವೆ. ಎಪ್ರಿಲ್‌, ಮೇ ತಿಂಗಳಲ್ಲಿ ಈ ಪುಷ್ಪವು ಹೆಚ್ಚಾಗಿ ಕಾಣಸಿಗುತ್ತದೆ.

Advertisement

ಮೇ ತಿಂಗಳು ಬಂತೆಂದರೆ ಎಲ್ಲೆಲ್ಲೂ ಗುಲ್‌ಮೊಹರ್‌ ಹೂವುಗಳದ್ದೇ ದರ್ಬಾರ್‌. ಗುಲ್‌ಮೊಹರ್‌ನ ಬೆಡಗು, ಚಿತ್ತಾಕರ್ಷಕ ಸೌಂದರ್ಯ ಈ ಸುಡು ಬಿಸಿಲಿನ ದಾಹವನ್ನು ತಣಿಸುವಂತೆ ಮಾಡುತ್ತದೆ.

ಗುಲ್‌ಮೊಹರ್‌ ಹೂವಿನ ಭರಾಟೆ ನಗ ರದ ಸೌಂದರ್ಯದೊಂದಿಗೆ ಸೊಬಗು ನೀಡು ತ್ತಿವೆ. ನಗರದ ಅಜ್ಜರಕಾಡು, ಮಣಿಪಾಲ ಸಹಿತ ಮೊದಲಾದ ಕಡೆಗಳಲ್ಲಿ ಹೂವುಗಳು ಕಾಣ ಸಿಗುತ್ತದೆ. ರಸ್ತೆಯ ಇಕ್ಕೆಲ ಗ ಳಲ್ಲಿ ನೋಡುಗರ ಕಣ್ಣಿಗೆ ಮುದ ನೀಡಿ, ಮಧು ವಣ ಗಿತ್ತಿಯಂತೆ ಸಿಂಗಾರಗೊಂಡು ಸ್ವಾಗತ ಕೋರುತ್ತಿವೆ. ಮರದ ತುಂಬಾ ಕೆಂಪನೆಯ ಶೃಂಗಾರ. ಕೆಂಬಣ್ಣದ ಹೂವನ್ನು ಮುಡಿ ತುಂಬಾ ಹೊತ್ತು ನಿಂತಿರುವ ಗುಲ್‌ಮೊಹರ್‌ ಮರಗಳು ಇನ್ನಿಲ್ಲದಂತೆ ಬೀಗುತ್ತಿವೆ. ಈ ಹಿಂದೆ ರಸ್ತೆ ಬದಿಯಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿತ್ತು. ನಗರ, ಗ್ರಾಮೀಣ ಭಾಗದ ರಸ್ತೆಗಳನ್ನು ಅಗಲಗೊಳಿಸುವ ಭರಾಟೆಯಲ್ಲಿ ಹಲವಾರು ಮರಗಳು ಬಲಿಯಾಗಿವೆ.

ಮದುವೆ ಮನೆ ಚಪ್ಪರದಲ್ಲಿ…
ಹಿಂದೆಲ್ಲ ಮೇ ತಿಂಗಳಲ್ಲಿ ಮದುವೆಗಳು ಹೆಚ್ಚಾಗಿ ನಡೆಯುವುದರಿಂದ ಗ್ರಾಮೀಣ ಭಾಗ ಗಳಲ್ಲಿ ಮದುವೆ ಮನೆಯ ಚಪ್ಪರದ ಸೌಂದ ರ್ಯವನ್ನು ಹೆಚ್ಚಿಸಲು ಈ ಹೂವುಗಳನ್ನು ಹಾಕ ಲಾಗುತ್ತಿತ್ತು. ಹಿಂದೆ ಈ ಹೂಗಳ ಬಳಕೆಯೂ ಕೂ ಡ ಹೆಚ್ಚಾಗಿತ್ತು. ಈಗೆಲ್ಲ ಮದುವೆಗಳು ಹೊಟೇಲ್‌, ಕಲ್ಯಾ ಣ ಮಂಟಪಗಳ ಗೋಡೆಗಳ ಮಧ್ಯೆ ಸೇರಿ ಕೊಂಡು ಗುಲ್‌ಮೊಹರ್‌ ಬಣ್ಣದಿಂದ ವಂಚಿತವಾಗಿದೆ. ಗುಲ್‌ಮೊಹರ್‌ ಹಿಂದಿನ ಮಕ್ಕಳಿಗೆ ಅತ್ಯಂತ ಪ್ರೀತಿ ಪಾತ್ರವಾದದ್ದು. ಗ್ರಾಮೀಣ ಮಕ್ಕಳು ಬೇಸಗೆ ರಜೆಯಲ್ಲಂತೂ ಈ ಮರದಡಿ ದಿನ ಕಳೆಯುತ್ತಿದ್ದರು.

ಹಲವು ಹೆಸರುಗಳು
ಗುಲ್‌ಮೊಹರ್‌ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಹೂ ಬಿಡುವುದರಿಂದ ಇದನ್ನು ಮೇ ಫ್ಲವರ್‌ ಎಂದೂ ಕರೆಯುತ್ತಾರೆ. ಕೆಂಬಣ್ಣದಿಂದ ಆಗಸಕ್ಕೆ ಕಿಚ್ಚು ಹತ್ತಿಸಿದಂತೆ ಕಾಣುವುದರಿಂದ “ಫ್ಲೇಮ್‌ ಆಫ್ ದಿ ಫಾರೆಸ್ಟ್‌'(ಕಾಡಿನ ಕಿಚ್ಚು) ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಕತ್ತಿಕಾಯಿ ಮರ, ಕೆನ್ನಕೇಸರಿ, ಕೆಂಪು ತುರಾಯಿ, ದೊಡ್ಡ ರತ್ನಗಂಧಿ ಇತ್ಯಾದಿ ಹೆಸರುಗಳಿವೆ.

Advertisement

(ಚಿತ್ರ: ಆಸ್ಟ್ರೋಮೋಹನ್‌)

Advertisement

Udayavani is now on Telegram. Click here to join our channel and stay updated with the latest news.

Next