Advertisement

ಹೆದ್ದಾರಿ ಸೊಬಗು ಹೆಚ್ಚಿಸಿದ ಗುಲ್ಮೊಹರ್‌ ಹೂವಿನ ಮರಗಳು

12:50 PM Jun 03, 2019 | Suhan S |

ಮಳವಳ್ಳಿ: ಕೆಂಪು ಹೂವನ್ನು ಒಳಗೊಂಡಿರುವ ಗುಲ್ಮೊಹರ್‌ ಮರಗಳು ನೋಡಲು ಅತ್ಯಾಕರ್ಷ ಣೀಯ. ಇವುಗಳು ಇರುವೆಡೆ ಸೊಬಗು ತುಂಬಿರುತ್ತದೆ. ಅಂತೆಯೇ ಹಲಗೂರು-ಮಳವಳ್ಳಿಗೆ ಹೋಗುವ ಹೆದ್ದಾರಿಯ ಎಡ ಮತ್ತು ಬಲಭಾಗ ಗಳಲ್ಲಿ ಗುಲ್ ಮೊಹರ್‌ ಮರಗಳಲ್ಲಿ ನಳನಳಿಸುತ್ತಿರುವ ಕೆಂಪು ಹೂವು ರಸ್ತೆ ಎಲ್ಲರ ಕಣ್ಮನ ಸೆಳೆಯುತ್ತಿದೆ.

Advertisement

ಮದ್ದೂರು ಸರ್ಕಲ್ ಬಳಿ ಇರುವ ಗೌರಿಶಂಕರ ಕಲ್ಯಾಣ ಮಂಟಪದ ಸಮೀಪವಿರುವ ರಸ್ತೆ ಅಕ್ಕ-ಪಕ್ಕದ ಗುಲ್ಮೊಹರ್‌ ಮರಗಳಲ್ಲಿ ಕೆಂಪು ಹೂವುಗಳು ವಸಂತಕಾಲದಲ್ಲಿ ಹೆಚ್ಚು ಹೂವು ಬಿಟ್ಟಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ, ಪರಿಸರ ಪ್ರೇಮಿಗಳಿಗೆ ಉತ್ತಮ ಗಾಳಿ, ಹೂವಿನ ಸುವಾಸನೆಯೊಂದಿಗೆ ವಿಶೇಷ ಅನುಭವ ನೀಡುತ್ತಿದೆ.ಈ ಹೂವುಗಳನ್ನು ಗೃಹ ಪ್ರವೇಶ, ಮದುವೆ ಸೇರಿದಂತೆ ಶುಭ- ಸಮಾರಂಭಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಸಮಾರಂಭ ಗಳಿಗೆ ಬರುವ ಗಣ್ಯರಿಗೆ ಕೆಂಪುಬಣ್ಣದ ಹೂವು ಹಾಗೂ ಎಲೆಗಳಿಂದ ಕೂಡಿದ ಕೊಂಬೆಗಳನ್ನು ತಂದು ಅಲಂಕರಿಸಿ ಸ್ವಾಗತಿಸಲಾಗುತ್ತದೆ. ಈ ಹೂವು ಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಈಗಲೂ ಹೆಚ್ಚು ಬಳಸಲಾಗುತ್ತಿದೆ.

ಹಲಗೂರು ಸಮೀಪ ಬೈಪಾಸ್‌ ರಸ್ತೆಯಲ್ಲಿ ಈ ಮರಗಳು ರಸ್ತೆ ಅಗಲೀಕರಣ ನೆಪದಲ್ಲಿ ಕೊಡಲಿ ಪೆಟ್ಟಿಗೆ ಸಿಗದೆ ಪಾರಾಗಿವೆ. ಅಂತೆಯೇ ರಸ್ತೆಗೂ ವಿಶೇಷ ಸೊಬಗನ್ನು ತಂದುಕೊಟ್ಟು ಪ್ರಯಾಣಿಕರಿಗೂ ಆನಂದ ಉಂಟು ಮಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next