Advertisement

Gulf Medical University: ತುಂಬೆ ವಿದ್ಯಾರ್ಥಿನಿಗೆ ಉಚಿತ ವೈದ್ಯಕೀಯ ಸೀಟು

01:12 AM Aug 26, 2023 | Team Udayavani |

ಬಂಟ್ವಾಳ: ಯುಎಇಯ ಅಜ್‌‍ಮಾನ್‌‍ನಲ್ಲಿರುವ ಗಲ್ಫ್ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ತುಂಬೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಅಫ್ರಾ ಫಾತಿಮಾ ಅವರಿಗೆ ಉಚಿತ ಎಂಬಿಬಿಎಸ್‌ ಸೀಟು ದೊರೆತಿದೆ.

Advertisement

ತುಂಬೆ ಗ್ರೂಪ್‌ ಅಜ್‌‍ಮಾನ್‌ ಹಾಗೂ ತುಂಬೆ ಪ.ಪೂ. ಕಾಲೇಜಿನ ಒಪ್ಪಂದದಂತೆ ತುಂಬೆ ಗ್ರೂಪಿನ ಸಂಸ್ಥಾಪಕ ತುಂಬೆ ಮೊಯಿದಿನ್‌‍ ಅವರು ಪ್ರತಿ ವರ್ಷ ಒಂದು ಉಚಿತ ಮೆಡಿಕಲ್‌ ಸೀಟನ್ನು ತುಂಬೆ ವಿದ್ಯಾಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದು, ಅದರಂತೆ ಈ ಬಾರಿ ಉಚಿತ ಸೀಟ್‌ ಅಫ್ರಾಳಿಗೆ ಲಭಿಸಿದೆ.

ಲಿಖಿತ ಪರೀಕ್ಷೆಯ ಮೂಲಕ ಆಯ್ಕೆಯಾದ ಅಫ್ರಾ ಫಾತಿಮಾಳಿಗೆ ಕಾಲೇಜಿನ ಅಧ್ಯಕ್ಷ ಬಿ.ಅಬ್ದುಲ್‌ ಸಲಾಂ ಅವರು ಆದೇಶ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್‌. ಗಂಗಾಧರ್‌ಆಳ್ವ ಹಾಗೂ ಕಚೇರಿ ಅಧೀಕ್ಷಕ ಬಿ.ಅಬ್ದುಲ್‌ ಕಬೀರ್‌ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಾಣೆಮಂಗಳೂರು ರಂಗೈಲ್‌ ನಿವಾಸಿ ಅಬೂಬಕ್ಕರ್‌ ಹಾಗೂ ಝೊಹರಾ ದಂಪತಿಯ ಪುತ್ರಿ.

 

Advertisement

Udayavani is now on Telegram. Click here to join our channel and stay updated with the latest news.

Next