Advertisement

ಜಿಲ್ಲಾಡಳಿತ ಮೌನಕ್ಕೆ ಭುಗಿಲೆದ್ದ ಆಕ್ರೋಶ

06:13 PM Feb 27, 2021 | |

ಕಲಬುರಗಿ: ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರೊಬ್ಬರು ಆತ್ಮಹತ್ಯೆ ಮಾಡಿಕೊಂಡರೂ ಜಿಲ್ಲಾಡಳಿತ ಮೌನವಾಗಿದೆ. ಸಮಸ್ಯೆ ಪರಿಹಾರಕ್ಕಾಗಿ
ಎರಡು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ್ದರೂ ಸಮಸ್ಯೆ ಆಲಿಸಲೂ ಜಿಲ್ಲಾಧಿಕಾರಿಗಳು ಬರುತ್ತಿಲ್ಲ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

Advertisement

ಸಾಲಗಾರರ ಕಿರುಕುಳ ತಾಳದೆ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶಂಕರ ಬಿರಾದಾರ ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ಮುಖಂಡರು, ಶಿಕ್ಷಕರು ಶಂಕರ ಬಿರಾದಾರ ಭಾವಚಿತ್ರ ಇರುವ ಬೃಹತ್‌  ಬ್ಯಾನರ್‌ ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು
ಶುಕ್ರವಾರ ಪ್ರತಿಭಟನೆ ಕೈಗೊಂಡಿದ್ದರು.

ಲಾಕ್‌ಡೌನ್‌ ಕಾರಣ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಶಿಕ್ಷಣ ಸಂಸ್ಥೆಗಳಾಗಿ ಸಾಲ ಮಾಡಿದ ಬ್ಯಾಂಕ್‌ ಕಂತುಗಳನ್ನು ಕಟ್ಟಲು
ಆಗುತ್ತಿಲ್ಲ. ಬ್ಯಾಂಕ್‌ಗಳು ಮತ್ತು ಸಾಲಗಾರರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ, ಸರ್ಕಾರ ಸ್ಪಂದಿಸುತ್ತಿಲ್ಲ. ಅದರಲ್ಲೂ ಸರ್ಕಾರ ಶುಲ್ಕ ರಿಯಾಯ್ತಿ ಘೋಷಿಸಿದೆ. ಶಾಲಾ ನವೀಕರಣಕ್ಕೆ ವಿವಿಧ ನಿಯಮಾವಳಿ ರೂಪಿಸಿ ಕಿರುಕುಳ ನೀಡುತ್ತಿದೆ. ಇದರಿಂದ ನೊಂದ ಶಂಕರ
ಬಿರಾದಾರ ಸಾವಿಗೆ ಶರಣಾಗಿದ್ದಾರೆ. ಅವರ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು.

ಸಾಲ ವಸೂಲಾತಿ ಮುಂದೂಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಿಕ್ಷಣ ಸಂಸ್ಥೆ ಮುಖ್ಯಸ್ಥರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆ ತೋರಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳೇ ಆಗಮಿಸಿ ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದರು. ಆದರೆ, ಜಿಲ್ಲಾಧಿಕಾರಿಗಳು ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ತಮ್ಮ
ಪ್ರತಿಭಟನೆ ತೀವ್ರಗೊಳಿಸಿ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪೊಲೀಸ್‌ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದರು. ಕೊನೆಗೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ಮೇಲ್ಭಾಗದ ಗೇಟ್‌ ಹತ್ತಿರ ಬಂದರು. ಆಗ ಶಿಕ್ಷಕಿಯರೆಲ್ಲರು ಅಲ್ಲಿಗೆ ಹೋದರು. ಕೆಳಗಡೆಯಿದ್ದವರು ಮೇಡಂ ಇಲ್ಲಿಗೆ ಬರಲಿ ಎಂದರು.

Advertisement

ಪ್ರತಿಭಟನಾನಿರತರನ್ನು ಪೊಲೀಸರು ಮನವೊಲಿಸುವಷ್ಟರಲ್ಲಿ ಜಿಲ್ಲಾಧಿಕಾರಿಗಳು ಅಲ್ಲಿಂದ ನಿರ್ಗಮಿಸಿ ತಮ್ಮ ಕಾರು ಹತ್ತಿ ತೆರಳಿದರು.
ಇದು ಪ್ರತಿಭಟನಾಕಾರರನ್ನು ಕೆರಳುವಂತೆ ಮಾಡಿತು. ನಂತರ ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಬಂದು ಸಮಸ್ಯೆ ಆಲಿಸಿ, “ಜಿಲ್ಲಾಧಿಕಾರಿಗಳಿಗೆ ಸನ್‌ ಸ್ಟೊಕ್‌ ಆಗಿದೆ’ ಎಂದು ಹೇಳಿ ಸಮಾಧಾನ ಮಾಡಲು ಯತ್ನಿಸಿದರು. ಇದರಿಂದ ಮತ್ತುಷ್ಟು ಕರೆಳಿದ ಪ್ರತಿಭಟನಾಕಾರರು ಒಬ್ಬ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಮೃತಪಟ್ಟಿದ್ದಾರೆ. ಇದಕ್ಕೆ ಕಾರಣವೇನು ಎಂಬ ಅರಿತುಕೊಳ್ಳುವುದೇ ಆಗದೇ ಇದ್ದರೆ ಹೇಗೆ? ನಮ್ಮ ಹೊಟ್ಟೆಗೆ ಬೆಂಕಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮನವಿ ಪತ್ರ ಸಲ್ಲಿಸಿದರು.

ಓದಿ : ಆಸ್ಕರ್ ರೇಸಿನಲ್ಲಿ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ ಸಿನಿಮಾ

Advertisement

Udayavani is now on Telegram. Click here to join our channel and stay updated with the latest news.

Next