ಕಲಬುರಗಿ: ಇಲ್ಲಿನ ಗುಲ್ಬರ್ಗ ವಿಶ್ವ ವಿದ್ಯಾಲಯದ ವಿರುದ್ದ ಏಕಕಾಲದಲ್ಲಿ ವಿವಿ ಕುಲಪತಿ ಕಚೇರಿ ಬಳಿ ಎರಡು ಕಡೆ ಪ್ರತಿಭಟನೆ ನಡೆಯುತ್ತಿದೆ.
ಹೊರ ಗುತ್ತಿಗೆ ನೌಕರರ ಸಂಘದಿಂದ ಒಂದು ಕಡೆ ಪ್ರತಿಭಟನೆ ನಡೆಯುತ್ತಿದ್ದರೆ, ಅಥಿತಿ ಉಪನ್ಯಾಸಕರ ವೇತನ ಹೆಚ್ಚಳಕ್ಕಾಗಿ ಮತ್ತೊಂದು ಕಡೆ ಪ್ರತಿಭಟನೆ ಮಾಡಲಾಗುತ್ತಿದೆ.
ಈ ವೆಳೆಯಲ್ಲಿ ಬೇಕೆ ಬೇಕು ನ್ಯಾಯ ಬೇಕು, ಧಿಕ್ಕಾರ ಧಿಕ್ಕಾರ ವಿವಿ ಕುಲಪತಿಗಳಿಗೆ ಧಿಕ್ಕಾರ.. ಹೀಗೆ ಏಕ ಕಾಲದಲ್ಲೇ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಗುಲ್ಬರ್ಗಾ ವಿಶ್ವ ವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ 300ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ಸಂಬಳ ಹೆಚ್ಚಿಸುವಂತೆ ಗುಲ್ಬರ್ಗಾ ವಿವಿ ಕುಲಪತಿ ದಯಾನಂದ ಅಗಸರ ಯಾವುದೇ ಸ್ಪಂದನೆ ಮಾಡುತ್ತಿಲ್ಲಾ, ಕಾಟಾಚಾರಕ್ಕೆ ಎಂಬಂತೆ ಕೇವಲ 83 ರೂಪಾಯಿ ಹೆಚ್ಚಳ ಮಾಡಿ ದುಡಿಯುವ ಸಿಬ್ಬಂದಿಗಳಿಗೆ ಅವಮಾನ ಮಾಡಿದ್ದಾರೆ. ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೇಯೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಮಾಡುವಂತೆ ಆದೇಶ ಹೊರಡಿಸಿದೆ. ಆದರೆ ಕುಲಪತಿಗಳು ಮಾತ್ರ ನಮ್ಮ ಸಂಬಳ ಹೆಚ್ಚಳ ಮಾಡುತ್ತಿಲ್ಲಾ, ವೇತನ ಹೆಚ್ಚಳ ಮಾಡುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲಾ ಎಂದು ಗುತ್ತಿಗೆ ನೌಕರರ ಸಂಘದ ಅದ್ಯಕ್ಷ ಪ್ರಕಾಶ್ ದೊಡ್ಡಮನಿ, ಗೌರವ ಅಧ್ಯಕ್ಷ ವಿಜಯಕುಮಾರ ಕೆಂಗಲ್ ಎಚ್ಚರಿಕೆ ನೀಡಿದ್ದಾರೆ..