ಒಂದು ವರ್ಷವೂ ಸುಗಮವಾಗಿ ಪರೀಕ್ಷೆ ನಡೆಸಲಿಕ್ಕೆ ಬಾರದು ಎನ್ನುವುದನ್ನು ಮತ್ತೂಮ್ಮೆ ನಿರೂಪಿಸಿದೆ.
Advertisement
ಮೇ 21ರಂದು ನಡೆಯಬೇಕಿದ್ದ ಬಿಎಸ್ಸಿ ಎರಡನೇ ಸೆಮಿಸ್ಟಾರ್ ಪರೀಕ್ಷೆಯನ್ನು ರವಿವಾರ ಮಧ್ಯರಾತ್ರಿ ಮುಂದೂಡಲಾಗಿತ್ತು. ಮೇ 23ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮುಂದೂಡುವ ನಿರ್ಧಾರ ಪ್ರಕಟಿಸಲಾಯಿತು.
Related Articles
Advertisement
ಕಳೆದ ಐದಾರು ವರ್ಷಗಳಿಂದ ಪರೀಕ್ಷೆ ಸಮಯದಲ್ಲಿ ಒಂದಿಲ್ಲ ಒಂದು ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗಗೊಳ್ಳುತ್ತಲೇ ಬಂದಿದೆ. ಕಳೆದ ಹಾಗೂ ಅದರ ಹಿಂದಿನ ವರ್ಷವಂತೂ ದಿನಾಲು ಎನ್ನುವಂತೆ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡು ಇಡೀ ವಿವಿಗೆ ಕಪ್ಪು ಚುಕ್ಕೆಯಾಗಿರುವುದನ್ನು ಯಾರೂ ಮರೆಯುವಂತಿಲ್ಲ.
ಪ್ರಶ್ನೆ ಪತ್ರಿಕೆ ಬಹಿರಂಗ ತನಿಖೆಗೆ ಒಳಪಡಿಸಲಾಯಿತಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ನೀಡಲಾಗಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ ಎನ್ನುವಂತಾಗಿದೆ. ಸಾಮೂಹಿಕ ನಕಲು ಎನ್ನುವುದು ಪರೀಕ್ಷೆಯಲ್ಲಿ ಬಿಡಿಸಲಾಗದನಂಟು ಎನ್ನುವಂತೆ ಬೆನ್ನು ಹತ್ತಿದೆ. ಇದನ್ನು ತಪ್ಪಿಸಲು ಪ್ರಸಕ್ತವಾಗಿ ಕ್ಲಸ್ಟರ್ ಪದ್ಧತಿ ಜಾರಿಗೆ ತರಲಾಗಿದೆ. ಆದರೆ ವಿವಿ ಚಾಪೆ ಕೆಳಗೆ ತೂರಿದರೆ ಖಾಸಗಿ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ರಂಗೋಲಿ ಕೆಳಗೆ ತೂರಿದಂತೆ ಕ್ಲಸ್ಟರ್ ಪದ್ಧತಿ ಉಲ್ಲಂಘನೆ (ವೈಲೆನ್ಸ್ ) ನಿಯಮದಡಿ ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ರೂ. ದಂಡ ಕಟ್ಟಿಸಿ ಖಾಸಗಿ ಕಾಲೇಜಿನವರು ತಮ್ಮ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಪಡೆಯುತ್ತಿರುವುದನ್ನು ನೋಡಿದರೆ ಪರೀಕ್ಷೆ
ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಹಿಂದುಳಿದ ಈ ಭಾಗದಲ್ಲಿನ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿ ಎನ್ನುವ ಆಶಯದೊಂದಿಗೆ ಮೂರು ದಶಕಗಳ ಹಿಂದೆ ಇಲ್ಲಿ ಪ್ರಾರಂಭವಾಗಿರುವ ಗುಲ್ಬರ್ಗ ವಿವಿ ಆರಂಭದಿಂದಲೂ ಒಂದಿಲ್ಲ ಒಂದು ವಿವಾದ ಹಗರಣ, ಕುಖ್ಯಾತಿ ಪಡೆಯುತ್ತಾ ಬಂದಿದೆ. ಅಲ್ಲದೇ ಈಗ ಸುಸೂತ್ರ ಪರೀಕ್ಷೆ ನಡೆಸಲಾರದ ಸಮಸ್ಯೆಯಿಂದ ಹೊರ ಬಾರದೇ ನರಳಾಡುತ್ತಿದೆ. ವಿವಿಯಲ್ಲಿ ಬಹು ಮುಖ್ಯವಾಗಿ ಜಾತಿಯತೆ ತಾಂಡವಾಡುತ್ತಿದೆ. ಎಲ್ಲದಕ್ಕೂ ಜಾತಿಯನ್ನೇ ಮುಂದು ಮಾಡಲಾಗುತ್ತಿದೆ. ಅದರಲ್ಲೂ ಅಧ್ಯಯನ-ಅಧ್ಯಾಪನ ಮರೆತಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಶೈಕ್ಷಣಿಕ ಚುಟವಟಿಕೆಗಳಲ್ಲಿ ಪ್ರಮುಖವಾಗಿರುವ ಪರೀಕ್ಷೆಯನ್ನೇ ಸರಿಯಾಗಿ ನಡೆಸಲಿಕ್ಕೆ ಬಾರದಂತಾಗಿರುವುದು ನಿಜಕ್ಕೂ ಆತ್ಮಾವಲೋಕನ ಮಾಡಿಕೊಂಡು ಅಮೂಲಾಗ್ರ ಸುಧಾರಣೆಯತ್ತ ಹೆಜ್ಜೆ ಇಡುವುದು ಅಗತ್ಯವಾಗಿದೆ ಬುಧವಾರ ನಡೆಯಬೇಕಿದ್ದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಕಾಲಕ್ಕೆ ಪ್ರಕಟಗೊಂಡು ವಿವಿಗೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ದಿಢೀರನೇ ಪರೀಕ್ಷೆ ಮುಂದೂಡಲಾಗಿದೆ. ಎಲ್ಲ ವಿಷಯಗಳ ಪರೀಕ್ಷೆ ಮುಗಿದ ನಂತರ ಕೊನೆಗೆ ಬುಧವಾರದ ಪರೀಕ್ಷೆ ನಡೆಸಲಾಗುವುದು.
ಡಾ| ಡಿ. ಎಂ. ಮದರಿ, ಕುಲಸಚಿವರು (ಮೌಲ್ಯಮಾಪನ), ಗುಲ್ಬರ್ಗ ವಿವಿ ಹಣಮಂತರಾವ ಭೈರಾಮಡಗಿ