Advertisement

ರಸ್ತೆ ಬದಿಯಲ್ಲೇ ಹೋಂವರ್ಕ್‌ ಮಾಡುವ ಮಕ್ಕಳು

06:20 PM Feb 27, 2021 | Team Udayavani |

ಜೇವರ್ಗಿ: ಸಮಯಕ್ಕೆ ಸರಿಯಾಗಿ ಬಸ್‌ ಬಾರದೇ ಇರುವುದರಿಂದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಬಸ್‌ಗಾಗಿ ಕಾಯುತ್ತಾ ರಸ್ತೆ ಬದಿಯಲ್ಲಿಯೇ ಕುಳಿತು ಹೋಂ ವರ್ಕ್‌ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನ ಚಿಗರಳ್ಳಿ ಕ್ರಾಸ್‌ದಿಂದ ಯಡ್ರಾಮಿ ಪಟ್ಟಣಕ್ಕೆ ಸಾಗುವ ಮಾರ್ಗವಾಗಿ ಸಮಯಕ್ಕೆ ಸರಿಯಾದ ಬಸ್‌ಗಳ ಸಂಚಾರ ಇಲ್ಲದೇ
ಇರುವುದರಿಂದ ತೊಂದರೆಯಾಗುತ್ತಿದೆ. ತಾಲೂಕಿನ ಯಾಳವಾರದಿಂದ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಉರ್ದು ಶಾಲೆಗೆ 50ಕ್ಕೂ
ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಜವಳಗಿ, ಗೊಬ್ಬರವಾಡಗಿ, ಕರಕಿಹಳ್ಳಿ, ಕಾಖಂಡಕಿ ಸೇರಿದಂತೆ ಹತ್ತಾರು ಗ್ರಾಮಗಳಿಂದ ಆಲೂರ ಸರಕಾರಿ ಪ್ರೌಢ ಶಾಲೆಗೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ.

ಶಾಲೆಗೆ ಹೋಗುವಾಗ ಇರದ ಬಸ್‌ನ ತೊಂದರೆ, ಶಾಲೆ ಬಿಟ್ಟ ನಂತರ ಸಕಾಲಕ್ಕೆ ಬಾರದೆ ತೊಂದರೆಯಾಗುತ್ತಿದೆ. ಮಧ್ಯಾಹ್ನ 4:30 ಗಂಟೆಗೆ ಶಾಲೆ ಬಿಟ್ಟ ನಂತರ 6:00 ಗಂಟೆ ವರೆಗೆ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು, ರಸ್ತೆ ಬದಿಯಲ್ಲಿಯೇ ಕುಳಿತು ಹೋಂ ವರ್ಕ್‌ (ಮನೆಪಾಠ)
ಮಾಡುವಂತ ಪರಿಸ್ಥಿತಿ ಎದುರಾಗಿದೆ. ಜೇವರ್ಗಿಯಿಂದ ಯಡ್ರಾಮಿಗೆ ತೆರಳಲು ಸಾಕಷ್ಟು ಬಸ್‌ ವ್ಯವಸ್ಥೆ ಇದೆ. ಆದರೆ ಯಡ್ರಾಮಿಯಿಂದ ಜೇವರ್ಗಿ
ಕಡೆ ಬರುವ ಬಸ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಜನಪ್ರತಿನಿ ಧಿಗಳಿಗೆ, ಅ ಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಕತ್ತಲಾದರೂ ಮನೆಗೆ ಬಾರದ ಮಕ್ಕಳಿಂದ ಪಾಲಕರು ಆತಂಕಕ್ಕೆ ಒಳಗಾಗುವಂತಾಗಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು
ಇರುವುದರಿಂದ ಮಕ್ಕಳ ಬರುವಿಕೆಗೆ ಕಾಯುವಂತಾಗಿದೆ. ಕೆಲ ಪಾಲಕರು ಬಸ್‌ ವ್ಯವಸ್ಥೆ ನೆಪವೊಡ್ಡಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇದರಿಂದ ಮಕ್ಕಳು ಅರ್ಧದಲ್ಲೇ ಶಾಲೆ ತೊರೆಯುವಂತಾಗಿದೆ. ಆಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಊರು ಬಿಟ್ಟು ಕಿಲೋ ಮೀಟರ್‌
ದೂರದಲ್ಲಿದೆ. ಇದರಿಂದ ರಸ್ತೆ ಬದಿಯಲ್ಲಿ ರಾತ್ರಿಯವರೆಗೂ ಬಸ್‌ಗಾಗಿ ಕಾಯ್ದು ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಕತ್ತಲಾಗುತ್ತಿದೆ. ಕೆಂಪು ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೂ, ಸ್ಪಂದಿಸದೆ ಇರುವ ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಪಾಲಕರು, ಶಿಕ್ಷಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ನೂತನ ತಾಲೂಕು ಕೇಂದ್ರವಾದ
ಯಡ್ರಾಮಿ ಪಟ್ಟಣಕ್ಕೆ ವಿದ್ಯಾರ್ಥಿಗಳಲ್ಲದೇ ಸಾಕಷ್ಟು ಜನ ಸರಕಾರಿ ಅಧಿ ಕಾರಿಗಳು ಹಾಗೂ ಸರಕಾರಿ ಕೆಲಸಕ್ಕೆ ತೆರಳುವ ಜನರಿಗೂ ತೊಂದರೆಯಾಗುತ್ತಿದೆ. ಇಜೇರಿ, ಸಾಥಖೇಡ, ಆಲೂರ, ಕರಕಿಹಳ್ಳಿ, ಜವಳಗಾ, ಮುತ್ತಕೋಡ, ಹರನಾಳ, ಹಂಗರಗಾ ಬಿ., ಸೈದಾಪುರ,
ಗುಳಾಳ, ಕಾಖಂಡಕಿ, ವರವಿ, ವಸ್ತಾರಿ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ
ಹೋಗಿ ಬರಲು ಸಮಸ್ಯೆಯಾಗುತ್ತಿದ್ದು, ಕೂಡಲೇ ಜೇವರ್ಗಿಯಿಂದ ಯಡ್ರಾಮಿ, ಯಡ್ರಾಮಿಯಿಂದ ಜೇವರ್ಗಿಗೆ ಹೆಚ್ಚಿನ ಬಸ್‌ ಸೌಕರ್ಯ ಕಲ್ಪಿಸಿಕೊಡಬೇಕೆಂದು ಜಯ ಕರವೇ ತಾಲೂಕು ಘಟಕದ ಅಧ್ಯಕ್ಷ ಸುಧೀಂದ್ರ ಇಜೇರಿ ನೀರಲಕೋಡ ಆಗ್ರಹಿಸಿದ್ದಾರೆ.

–ವಿಜಯಕುಮಾರ ಎಸ್‌.ಕಲ್ಲಾ

Advertisement
Advertisement

Udayavani is now on Telegram. Click here to join our channel and stay updated with the latest news.

Next