Advertisement
ಎನ್ ಐಎ ಕೋರ್ಟ್ ನ ಅನುಮತಿ ಪಡೆದು ಉಗ್ರ ಜುಲ್ಫಿಕರ್ ಶಿಫ್ಟ್, ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಹಾಗೂ ಅಬ್ದುಲ್ ಖಾದರ್ ಜಿಲಾನಿ ಧಾರವಾಡ ಕೇಂದ್ರ ಕಾರಾಗೃಹ, ಶೇಖ್ ಸದಾಂ ಹುಸೇನ್- ಕೇಂದ್ರ ಕಾರಾಗೃಹ ಶಿವಮೊಗ್ಗ, ಜಾಕೀರ್ ತಂದೆ ಹನೀಫ್- ಕೇಂದ್ರ ಕಾರಾಗೃಹ ಶಿವಮೊಗ್ಗ, ವಿಶಾಲ್ ತಂದೆ ವಿಜಯಕುಮಾರ್ ರಾಥೋಡ್ ಕೇಂದ್ರ ಕಾರಾಗೃಹ ಬಳ್ಳಾರಿ ಜೈಲುಗಳಿಗೆ ಎತ್ತಂಗಡಿ ಮಾಡಲಾಗಿದೆ.
Related Articles
Advertisement
ಹೊಸ ಜೈಲರ್ ನಿಂದ ಟೈಟ್:
ಈ ಎಲ್ಲಾ ಅಕ್ರಮಗಳಿಗೆ ಡಾ. ಅನಿತಾ ನೂತನವಾಗಿ ಜೈಲರ್ ಆಗಿ ಬರುವ ಮುಖಾಂತರ ಇಡೀ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು.
ಇದರಿಂದಾಗಿ ಪ್ರಮುಖ ಕೈದಿಗಳು ಸೇರಿದಂತೆ ಇತರರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು. ಅದಲ್ಲದೆ ಜೈಲಿನ ಸಿಬ್ಬಂದಿ ಹಾಗೂ ಕೆಲ ಅಧಿಕಾರಿಗಳಿಗೆ ಬರುತ್ತಿದ್ದ ಆದಾಯವು ನಿಂತು ಹೋಗಿತ್ತು. ಇದರಿಂದಾಗಿ ಇಡೀ ವ್ಯವಸ್ಥೆಯ ವಿರುದ್ಧ ಭುಗಿಲೇಳುವ ಮೂಲಕ ಕೇಂದ್ರ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಆಗುವಂತೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಮಿಷನರ್ ಸೇರಿದಂತೆ ಬಂದಿಖಾನೆಯ ಹಲವು ಹಿರಿಯ ಅಧಿಕಾರಿಗಳು ಕೂಡ ಕಲ್ಬುರ್ಗಿ ಜೈಲಿಗೆ ಭೇಟಿ ನೀಡಿ ಗಮನ ಸೆಳೆದಿದ್ದರು. ಆದರೂ ಕೂಡ ಕೈದಿಗಳು ಸುಮ್ಮನಾಗಿರಲಿಲ್ಲ. ಸಾಲದಕ್ಕೆ ನೂತನ ಜೈಲರ್ ಅಕೌಂಟಿಗೆ ಹಣ ವರ್ಗಾವಣೆಯಂತಹ ಮತ್ತು ಕಾರನ್ನು ಸ್ಪೋಟಿಸುವ ಬೆದರಿಕೆ ಕೂಡ ಹಾಕಿದ್ದರು. ಇದರಿಂದಾಗಿ ಕಲ್ಬುರ್ಗಿ ಕೇಂದ್ರ ಕಾರಾಗೃಹ ರಾಜ್ಯದ ಗಮನ ಸೆಳೆದಿತ್ತಲ್ಲದೆ, ಕೈದಿಗಳ ಕಪಿಮುಷ್ಠಿಯಲ್ಲಿತ್ತು ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈಗ ಈ ಎಲ್ಲಾ ಕೂಕೃತ್ಯಗಳಿಗೆ ನೂತನ ಜೈಲರ್ ಬ್ರೇಕ್ ಹಾಕಿದಂತಾಗಿದೆ.
ಎನ್ ಐ ಏ ಕೋರ್ಟ್ ಅನುಮತಿ ಪಡೆಯುವ ಮೂಲಕ ಜೈಲರ್ ಅನಿತಾ, ಜುಲ್ಫಿಕರ್ ಸೇರಿದಂತೆ ಹಲವು ಕಿಡಿಗೇಡಿ ಕೈದಿಗಳನ್ನು ಹೆಡಮುರಿ ಕಟ್ಟಿದ್ದಾರೆ. ಅದಲ್ಲದೆ ಕೈದಿಗಳ ಇಂತಹ ಸಾಹಸಕ್ಕೆ ಬಂದಿಖಾನೆ ಇಲಾಖೆ ಬಗ್ಗುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಇದರಿಂದಾಗಿ ಕಲ್ಬುರ್ಗಿ ಜೈಲಿನಲ್ಲಿರುವ ವಾತಾವರಣ ತುಸು ತಿಳಿಯಾಗುವ ಸಾಧ್ಯತೆ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.