Advertisement
ಜ. 3ರಂದು ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿಯಾಗಿ ಬಿದ್ದಿದ್ದ ದೀಪಕ್ ರಾವ್ ಅವರ ರಕ್ಷಣೆಗೆ ಧಾವಿಸಿದ್ದ ಅಬ್ದುಲ್ ಮಜೀದ್ ಹಾಗೂ ಆದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿ ಯಲ್ಲಿದ್ದ ಬಶೀರ್ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ ಶೇಖರ್ ಕುಲಾಲ್ ಅವರಿಗೆ ಪಿ. ವಿಲಾಸ್ ಕುಮಾರ್ ಅವರು ಕಳುಹಿಸಿಕೊಟ್ಟಿರುವ ತಲಾ 50,000 ರೂ. ಮೊತ್ತದ ಚೆಕ್ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ನೀಡಿ ಅಭಿನಂದಿಸಿದರು.
ಚೆಕ್‌ಗಳೊಂದಿಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ಪತ್ರವೊಂದನ್ನು ಬರೆದಿರುವ ಪಿ. ವಿಲಾಸ್ ಕುಮಾರ್ ಅವರು “ಅಬ್ದುಲ್ ಮಜೀದ್ ಹಾಗೂ ಶೇಖರ್ ಅವರು ಮಾಡಿರುವ ಉದಾತ್ತ ಕಾರ್ಯವನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಮಜೀದ್ ಹಾಗೂ ಶೇಖರ್ ಮತ್ತು ಅವರ ಸ್ನೇಹಿತ ತಮ್ಮ ಜೀವಕ್ಕೆ ಎದುರಾಗಬಹುದಾದ ಅಪಾಯಗಳನ್ನು ಲೆಕ್ಕಿಸದೆ, ಜಾತಿ, ಧರ್ಮ ನೋಡದೆ ರಕ್ಷಣೆಗೆ ಧಾವಿಸುವ ಮೂಲಕ ತಾವು ನಿಜವಾದ ಮಾನವತಾವಾದಿಗಳು ಮತ್ತು ಜಾತ್ಯತೀತ ವಾದಿಗಳೆಂದು ತಮ್ಮನ್ನು ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ದ್ವೇಷ ವನ್ನು ಹರಡಲು ಪ್ರಯತ್ನಿಸುವ ವ್ಯಕ್ತಿಗಳಿಗೆ ಇವರು ಮಾದರಿಯಾಗಿದ್ದಾರೆ. ಇವರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ ಮತ್ತು ದ.ಕ. ಜಿಲ್ಲೆಗೆ ಇವರು ನೀಡಿರುವ ಸಂದೇಶ ಬಹು ಕಾಲ ಉಳಿಯಬೇಕು’ ಎಂದು ಹೇಳಿದ್ದಾರೆ. ಸರಕಾರವೂ ಅಭಿನಂದಿಸಲಿ
“ಮಜೀದ್ ಮತ್ತು ಶೇಖರ್ ಅವರ ಪರಿಚಯ ನನಗಿಲ್ಲ. ನಾನು ಶ್ರೀಮಂತನಲ್ಲ. ಓರ್ವ ಸಾಮಾನ್ಯ ನ್ಯಾಯವಾದಿ. ನಾನು ಯಾವುದೇ ಪ್ರಚಾರಕ್ಕೋಸ್ಕರ ಈ ಚೆಕ್‌ಗಳನ್ನು ಅವರಿಗೆ ಕಳುಹಿಸಿಕೊಡುತ್ತಿಲ್ಲ. ಸಮಾಜ ದಲ್ಲಿ ದ್ವೇಷ, ಅಶಾಂತಿಯನ್ನು ಹರಡುವ ಉದ್ದೇಶದಿಂದ ಇಂದು ಕೆಲವು ಮಂದಿ ಕೊಲೆ ಮಾಡಲು, ಮೂಗು, ನಾಲಗೆ, ಕಿವಿ ಕತ್ತರಿಸಲು ಲಕ್ಷ, ಕೋಟಿ ರೂಪಾಯಿಗಳ ಬಹುಮಾನ ಘೋಷಿಸುವುದನ್ನು ಕಾಣು ತ್ತಿದ್ದೇವೆ. ಇಂತಹ ಶಕ್ತಿಗಳಿಗೆ ಉತ್ತರ ನೀಡುವ ಹಾಗೂ ಜಾತ್ಯತೀತವಾದ ಮತ್ತು ಶಾಂತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹಾಗೂ ಮಜೀದ್ ಹಾಗೂ ಶೇಖರ್ ಅವರು ಮಾಡಿರುವ ಉದಾತ್ತ ಕಾರ್ಯವನ್ನು ಗೌರವಿಸಿ ಅವರಿಗೆ ತಲಾ 50,000 ರೂ. ಮೊತ್ತದ ಚೆಕ್‌ಗಳನ್ನು ಕಳುಹಿಸುತ್ತಿದ್ದೇನೆ. ಮಾನವೀ ಯತೆ, ಜಾತ್ಯತೀತವಾದದ ಮೇಲೆ ನಂಬಿಕೆ ಇರುವವರಿಂದ ಮಾತ್ರ ಇವರಿಗೆ ಅಭಿನಂದನೆಗಳು ದೊರೆ ತರೆ ಸಾಲದು. ಸರಕಾರದಿಂದಲೂ ಅಭಿ ನಂದನೆ ಗಳು ಸಲ್ಲ ಬೇಕು. 800 ಕಿ.ಮೀ. ದೂರದಲ್ಲಿರು ವುದ ರಿಂದ ಮತ್ತು ಕೆಲವು ಪೂರ್ವನಿರ್ಧರಿತ ಕೆಲಸಗಳ ಕಾರಣದಿಂದಾಗಿ ನನಗೆ ವೈಯಕ್ತಿಕ ವಾಗಿ ಅಲ್ಲಿಗೆ ಬರಲಾಗುತ್ತಿಲ್ಲ. ಆದುದ ರಿಂದ ನನ್ನ ಈ ಚೆಕ್‌ಗಳನ್ನು ಇಬ್ಬ ರಿಗೆ ಹಸ್ತಾಂ ತರಿಸ ಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದ ವರು ಜಿಲ್ಲಾಧಿಕಾರಿಯವರನ್ನು ಕೋರಿದ್ದರು.
Related Articles
Advertisement
ಜೀವ ಉಳಿಸಲು ನೆರವಾಗಿ ಯಾವುದೇ ವ್ಯಕ್ತಿ ಅಪಘಾತಕ್ಕೀಡಾದಾಗ, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾಗ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಧಾವಿಸುವ ಮೂಲಕ ಮಾನವೀàಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಎಲ್ಲರೂ ತೋರ್ಪಡಿಸಬೇಕು ಮತ್ತು ಜೀವ ಉಳಿಸಲು ಸಹಾಯ ಮಾಡಬೇಕು. ಸಹಾಯ ಮಾಡಿದವರ ರಕ್ಷಣೆಗೆ ಕಾನೂನು ಕೂಡ ನೆರವಿಗೆ ಬರುತ್ತದೆ ಎಂದು ಡಿಸಿಪಿ ಹನುಮಂತರಾಯ ಸಾರ್ವಜನಿಕರಲ್ಲಿ ಕೋರಿದರು.