Advertisement

27ರಂದು ಗುಲಬರ್ಗಾ ವಿವಿ ಘಟಿಕೋತ್ಸವ

10:53 AM Feb 25, 2018 | |

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ 36ನೇ ವಾರ್ಷಿಕ ಘಟಿಕೋತ್ಸವ ಫೆ. 27ರಂದು ಬೆಳಗ್ಗೆ 11:30ಕ್ಕೆ
ವಿವಿಯ ಡಾ| ಅಂಬೇಡ್ಕರ ಭವನದಲ್ಲಿ ನಡೆಯಲಿದೆ.

Advertisement

ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ವಜುಭಾಯ್‌ ರೂಡಾಭಾಯ್‌ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಉನ್ನತ ಶಿಕ್ಷಣ ಖಾತೆ ಸಚಿವ ಹಾಗೂ ವಿಶ್ವವಿದ್ಯಾಲಯದ ಸಮ-ಕುಲಾಧಿ ಪತಿ ಬಸವರಾಜ ರಾಯರಡ್ಡಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ ಹಾಗೂ ಇಂಡಿಯನ್‌ ನ್ಯಾಷನಲ್‌ ಸೈನ್ಸ್‌ ಅಕಾಡೆಮಿ ಹಿರಿಯ ವಿಜ್ಞಾನಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ| ಜಿ.ಪದ್ಮನಾಬನ್‌ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
ಈ ಬಾರಿ ದಾನಿಗಳ ಪ್ರಾಯೋಜಕತ್ವ ದಿಂದ 13 ಚಿನ್ನದ ಪದಕಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, ಒಟ್ಟಾರೆ 165 ಚಿನ್ನದ ಪದಕಗಳಲ್ಲಿ 158 ಚಿನ್ನದ ಪದಕಗಳನ್ನು 67 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ನೀಡಲಾಗುವುದು. 46 ಮಹಿಳಾ ವಿದ್ಯಾರ್ಥಿ ಹಾಗೂ 21 ಪುರುಷ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಳ್ಳಲಿದ್ದಾರೆ. ಉಳಿದ 7 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ತಲಾ 6 ಜನ ಮಹಿಳಾ ಹಾಗೂ ಪುರುಷರಂತೆ ಒಟ್ಟು 12 ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. 

ಮ್ಯಾನೇಜ್‌ಮೆಂಟ್‌ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ರಸಿಕಾ.ಪಿ.ಮೆಹತಾ ಅತಿ ಹೆಚ್ಚು (8) ಚಿನ್ನದ ಪದಕ ಪಡೆದಿದ್ದಾರೆ. ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಕಾಶಿರಾಯ ಜಿರೊಳಿ, ಕನ್ನಡ ವಿಭಾಗದಲ್ಲಿ ರೇಖಾ ಬಸವರಾಜ ತಲಾ (7), ರಾಜ್ಯಶಾಸ್ತ್ರ ವಿಭಾಗದಲ್ಲಿ ಪಾರ್ವತಿ ಯಂಕಣಗೌಡ, ಎಂಸಿಎ ವಿಭಾಗದಲ್ಲಿ ಪೂಜಾ ಮಡೆಪ್ಪ ಹಾಗೂ ಗಣಿತ ವಿಭಾಗದಲ್ಲಿ ರೇಖಾ ಶಂಕರೇಗೌಡ ಜಿ. ತಲಾ (6) ಚಿನ್ನದ ಪದಕ ಹಾಗೂ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಿಯಂ ಸೂರಿ ಹಾಗೂ ರಸಾಯನಶಾಸ್ತ್ರ ವಿಭಾಗದಲ್ಲಿ ಸರಸ್ವತಿ ಯು. ತಲಾ (5) ಚಿನ್ನದ ಪದಕ ಪಡೆದಿದ್ದಾರೆ ಎಂದು ವಿವರಿಸಿದರು. 

291 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುತ್ತಿದ್ದು, ಇದರಲ್ಲಿ 180 ಪುರುಷ ಅಭ್ಯರ್ಥಿಗಳು ಮತ್ತು 111 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಸ್ನಾತಕ, ಸ್ನಾತಕೋತ್ತರ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಪದವಿಗೆ ಒಟ್ಟು 4,183 ವಿದ್ಯಾರ್ಥಿಗಳು ಭಾಜನರಾಗಿದ್ದು, ಈ ಪೈಕಿ 2203 ಪುರುಷ, 1980 ಮಹಿಳಾ ವಿದ್ಯಾರ್ಥಿನಿಯರು ಸೇರಿದ್ದಾರೆ. ಅದೇ ರೀತಿ 23,102 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲಿದ್ದು, ಇದರಲ್ಲಿ 12809 ಪುರುಷ ಮತ್ತು 10293 ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದು ತಿಳಿಸಿದರು.

ಘಟಿಕೋತ್ಸವಕ್ಕೆ ಬರುವಂತೆ ರಾಜ್ಯಪಾಲರನ್ನು ಕೇಳಿಕೊಳ್ಳಲಾಗಿದೆ. ಬರುವ ವಿಶ್ವಾಸವಿದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವ ಪ್ರೊ| ಡಿ.ಎಂ. ಮದರಿ ಮತ್ತು ಹಣಕಾಸು ಅಧಿಕಾರಿ ಲಕ್ಷ್ಮಣ
ರಾಜನಾಳಕರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಎಂ.ಎಸ್‌. ಪಾಸೋಡಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಪರೀಕ್ಷಾ ಸುಧಾರಣೆಗೆ ದಿಟ್ಟ ಹೆಜ್ಜೆ
ಕಲಬುರಗಿ: ಪ್ರಶ್ನೆ ಪತ್ರಿಕೆ ಪದೇ-ಪದೇ ಬಹಿರಂಗದಿಂದ ಮುಜುಗರಕ್ಕೊಳಪಡುವುದನ್ನು ತಪ್ಪಿಸಿಕೊಳ್ಳಲು ಗುಲಬರ್ಗಾ
ವಿಶ್ವವಿದ್ಯಾಲಯ ಕ್ಲಸ್ಟರ್‌ ಪದ್ಧತಿಯಲ್ಲಿ ಪರೀಕ್ಷೆ ನಡೆಸಲು ಹಾಗೂ ಆನ್‌ಲೈನ್‌ ಮುಖಾಂತರ ಪ್ರಶ್ನೆ ಪತ್ರಿಕೆ ಪರೀಕ್ಷೆ ಸಮಯದ ಅರ್ಧ ಗಂಟೆ ಮುಂಚೆ ನೀಡಲು ಯೋಜಿಸಲಾಗಿದೆ ಕುಲಪತಿ ಪ್ರೊ| ಎಸ್‌. ಆರ್‌. ನಿರಂಜನ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, 500 ವಿದ್ಯಾರ್ಥಿಗಳಿರುವ ಕಾಲೇಜ್‌ ಗೆ ಅದರಲ್ಲೂ ಎಲ್ಲ ಸೌಲಭ್ಯಗಳುಳ್ಳ ವಿದ್ಯಾ ಕೇಂದ್ರಕ್ಕೆ ಪರೀಕ್ಷಾ ಕೇಂದ್ರ ನೀಡುವುದು, ಕ್ಲಸ್ಟರ್‌ ಪದ್ಧತಿಯಲ್ಲಿ ಪರೀಕ್ಷೆ ನಡೆಸಲು ಹಾಗೂಆನ್‌ಲೈನ್‌ ಮುಖಾಂತರವೇ ಪ್ರಶ್ನೆ ಪತ್ರಿಕೆ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಕಳೆದ ನವೆಂಬರ್‌ದಲ್ಲಿ ಸತತ ಎರಡು ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿರುವುದು ವಿವಿಗೆ ಹಲವಾರು ಪಾಠ ಕಲಿಸಿದೆ. ಹೀಗಾಗಿ ದಿಟ್ಟ ಹೆಜ್ಜೆ ಇಡಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸಿದ ಶಿಕ್ಷಣ ಸಂಸ್ಥೆ ಮಾನ್ಯತೆ ಹಿಂತೆಗೆದುಕೊಳ್ಳಲಾಗಿದೆ. 2 ಲಕ್ಷ ರೂ ದಂಡ ವಿಧಿಸಲಾಗುತ್ತಿದೆ ಎಂದು ವಿವರಿಸಿದರು

ಬಲಬೀರ್‌ಸಿಂಗ್‌ ಗೌರವ ಡಾಕ್ಟರೆಟ್‌
ಕಲಬುರಗಿ: ಫೆ. 27ರಂದು ನಡೆಯುತ್ತಿರುವ ಗುಲಬರ್ಗಾ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೆಟ್‌ ನೀಡಲಾಗುತ್ತಿದೆ. ಬೀದರ ಗುರುನಾನಕ್‌ ಶಿಕ್ಷಣ ಸಂಸ್ಥೆ ಹಾಗೂ ಗುರುದ್ವಾರದ ಸರ್ದಾರ ಬಲಬೀರ್‌ಸಿಂಗ್‌ ಅವರಿಗೆ ಗೌರವ ಡಾಕ್ಟರೆಟ್‌ ನೀಡಲು ನಿರ್ಧರಿಸಲಾಗಿದೆ. ಗೌರವ ಡಾಕ್ಟರೆಟ್‌ಗೆ ಒಟ್ಟು 24 ಅರ್ಜಿಗಳು ಬಂದಿದ್ದವು. ಅವುಗಳನ್ನೆಲ್ಲ ಪರಿಶೀಲಿಸಿ ಕಳುಹಿಸಲಾದ ಹೆಸರುಗಳಲ್ಲಿ ರಾಜ್ಯಪಾಲರು ನೇಮಿಸಿದ ಸಮಿತಿ ಮೂರು ಹೆಸರು ಕಳುಹಿಸಿದ ಪಟ್ಟಿಯಲ್ಲಿ ರಾಜ್ಯಪಾಲರು ಓರ್ವರ ಹೆಸರನ್ನು ಅಂತಿಮಗೊಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next