Advertisement

ಎರ್ಮಾಳು ಕಲ್ಸಂಕ ಬಳಿ ಬೆಂಕಿ ದುರಂತ: ಲಕ್ಷಾಂತರ ರೂ. ಮೌಲ್ಯದ ಗುಜರಿ ಭಸ್ಮ

04:04 PM Apr 19, 2019 | keerthan |

ಪಡುಬಿದ್ರಿ: ಎರಡು ದಿನಗಳ ಹಿಂದೆ ಎರ್ಮಾಳು ಕಲ್ಸಂಕ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯು ಗುರುವಾರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪಕ್ಕೆ ವ್ಯಾಪಿಸಿ, ಅಲ್ಲಿದ್ದ ಗುಜರಿ ಅಂಗಡಿಗೆ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿವೆ.

Advertisement

ಕಲ್ಸಂಕ ಬೈಲಿಗೆ ಮಂಗಳವಾರ ರಾತ್ರಿ ವೇಳೆ ಬಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಹಾಯದಿಂದ ಸ್ಥಳೀಯರು ನಂದಿಸಿದ್ದರು. ಆದರೂ ಅಲ್ಲಿ ಉಳಿ ದಿದ್ದ ಕಿಡಿ ಬುಧ ವಾರ ಗುಂಡ್ಲಾಡಿ ಪ್ರದೇಶದ ಕಾಡಿಗೆ ವ್ಯಾಪಿಸಿ ಸಾಕಷ್ಟು ಮರಗಿಡಗಳಿಗೆ ಹಾನಿಯಾಗಿತ್ತು. ಸ್ಥಳೀಯರು ಅದನ್ನು ನಂದಿಸಿದ್ದರು. ಆದರೆ ಅಲ್ಲಿ ಉಳಿದಿದ್ದ ಬೆಂಕಿ ಕಿಡಿ ಗುರುವಾರ ಗಾಳಿಯರಭಸಕ್ಕೆ ಹೆದ್ದಾರಿ ಪ್ರದೇಶಕ್ಕೆ ವ್ಯಾಪಿಸಿ ಅಬ್ದುಲ್‌ ಖಾದರ್‌ ಅವರ ಗುಜರಿ ಅಂಗಡಿ ಸುತ್ತಮುತ್ತ ರಾಶಿ ಹಾಕಿದ್ದ ಪ್ಲಾಸ್ಟಿಕ್‌ ಸಹಿತ ಗುಜರಿ ವಸ್ತುಗಳನ್ನು ಆಹುತಿ ತೆಗೆದುಕೊಂಡಿತು.

ಬೆಂಕಿ ಹಾಗೂ ದಟ್ಟ ಹೊಗೆಯಿಂದ ಸಂಚಾರಕ್ಕೂ ಸ್ವÌಲ್ಪ ಕಾಲ ತೊಡಕಾಯಿತು. ಈ ಸಂದರ್ಭ ಚುನಾವಣಾ ಕರ್ತವ್ಯದಲ್ಲಿದ್ದ ಕಾಪು ತಹಶೀಲ್ದಾರ್‌ ರಶ್ಮಿ ಅವರು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಹಾಗೂ ಯುಪಿಸಿಎಲ್‌ನ ಅಗ್ನಿಶಾಮಕ ವಾಹನವನ್ನು ಕರೆಸಿ ಬೆಂಕಿ ನಂದಿಸಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next