Advertisement
ದಿನದ ದ್ವಿತೀಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ 51-25 ಭರ್ಜರಿ ಅಂತರದಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿತು. ಆದರೆ ಕೊನೆಯ 2 ಸ್ಥಾನದಲ್ಲಿರುವ ಈ ಎರಡೂ ತಂಡಗಳಿಗೆ ಪ್ಲೇ-ಆಫ್ ಪ್ರವೇಶ ಬಹುತೇಕ ಮುಚ್ಚಿದೆ.
ಗುಜರಾತ್ ವಿರುದ್ಧ ಯುಪಿ ಮೊದಲಿನಿಂದಲೇ ಮೇಲುಗೈ ಸಾಧಿಸುತ್ತ ಬಂತು. ಗುಜರಾತ್ ಸಂಘಟಿತ ಹೋರಾಟದದಲ್ಲಿ ತೀವ್ರ ಹಿನ್ನಡೆ ಕಂಡಿತು. ದಾಳಿ ವಿಭಾಗದಲ್ಲಿ ಸಚಿನ್ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರು 11 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 10 ಅಂಕ ಗಳಿಸಿದರು. ಸುನೀಲ್ ಕುಮಾರ್ ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಆಟವಾಡಿದರು. ಅವರು 6 ಬಾರಿ ದಾಳಿ ನಡೆಸಿ, 7 ಅಂಕ ಗಳಿಸಿದರು. ಆದರೆ ಇವರಿಗೆ ಬೇರೆ ಆಟಗಾರರ ನೆರವು ಲಭಿಸದ ಕಾರಣ ತಂಡ ಸೋಲು ಕಾಣಬೇಕಾಯಿತು. ವಿಜೇತ ಯುಪಿ ಪರ ಶ್ರೀಕಾಂತ್ ಜಾಧವ್ ಉತ್ತಮ ದಾಳಿ ನಡೆಸಿದರು. ಅವರು 13 ಯತ್ನಗಳಲ್ಲಿ 6 ಅಂಕ ತಂದು ಕೊಟ್ಟರು. ರಕ್ಷಣೆಯಲ್ಲಿ ಸುಮಿತ್ ಯಶಸ್ವಿ ಪ್ರದರ್ಶನ ನೀಡಿದರು. ಇವರು 8 ಯತ್ನಗಳಲ್ಲಿ 5 ಅಂಕ ಗಳಿಸಿದರು. ತಂಡದ ಸಂಘಟಿತ ಆಟ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.