Advertisement
ಕಾಪು: ಮೂರು ದಶಕಗಳ ಹಿಂದೆ ಮೂಳೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೈನುಗಾರರು ಸೈಕಲ್‌ನವರಿಗೆ ಕಡಿಮೆ ದರದಲ್ಲಿ ಹಾಲು ಪೂರೈಸುತ್ತಿದ್ದರು. ಅಂದು ಹಾಲು ಉತ್ಪಾದಕರಿಗೆ ಸರಿಯಾದ ಪ್ರತಿಫಲ ಸಿಗುತ್ತಿಲವಲ್ಲ ಎನ್ನುವ ಕೊರಗು ಹೈನುಗಾರರ ಶ್ರಮವನ್ನು ಅರಿತಿದ್ದ ಕೆಲವರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ದೇವದಾಸ ಶೆಟ್ಟಿ ಅವರು ಊರಿನ ಜನರನ್ನು ಒಟ್ಟುಗೂಡಿಸಿ ಗುಜರಾತ್ ಮಾದರಿಯಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸುವ ಛಲ ಹೊತ್ತು ಎಂ. ಮನೋಹರ ಶೆಟ್ಟಿ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ, ಹಿರಿಯರಾದ ಗ್ಯಾಬ್ರಿಯಲ್ ಅಮ್ಮನ್ನ ಮತ್ತು ಸಮಾನ ಮನಸ್ಕರನ್ನು ಸೇರಿಸಿಕೊಂಡು 1989 ಜು. 1 ರಂದು ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಿದರು.
ಸದಸ್ಯರಿಗೆ ಪ್ರತೀ ವರ್ಷವೂ ಲಾಭದಲ್ಲಿ ಬೋನಸ್, ಪ್ರೋತ್ಸಾಹ ಧನ, ಡಿವಿಡೆಂಡ್ ಹಾಗೂ ಹೆಚ್ಚು ಹಾಲು ಪೂರೈಸಿದ ಮೂರು ಜನರಿಗೆ ಸಮ್ಮಾನ, ಸದಸ್ಯರು ಬಯಸಿದಲ್ಲಿ ಹೈನುಗಾರಿಕೆ ಸಾಲವನ್ನು 3% ಬಡ್ಡಿಯಲ್ಲಿ ಕಾಪು ಸಿ.ಎ. ಸಂಘದ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಸಂಘದ ಸದಸ್ಯರು ಮೃತಪಟ್ಟಲ್ಲಿ, ರಾಸು ಮೃತಪಟ್ಟಲ್ಲಿ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್‌ನ ಮುಖಾಂತರ ಪರಿಹಾರ ಧನವನ್ನು ಒದಗಿಸಿಕೊಡಲಾಗುತ್ತದೆ.
Related Articles
Advertisement
ಮೂರು ಜನರಿಂದ ಆರಂಭಗೊಂಡು 3-4 ಲೀಟರ್ ಹಾಲಿನಿಂದ ಪ್ರಾರಂಭಗೊಂಡು ಈಗ 600 ಲೀಟರ್ ಹಾಲು ಶೇಖರಣೆಯಾಗುತ್ತದೆ. ಪ್ರಸ್ತುತ 151 ಜನ ಸದಸ್ಯರಿದ್ದು ಮೂಳೂರು ಮಾತ್ರವಲ್ಲದೇ ಬೆಳಪು ಮತ್ತು ಉಚ್ಚಿಲ ಪರಿಸರದ ಸದಸ್ಯರನ್ನೂ ಸೇರಿಸಿಕೊಂಡು ಮೂರು ಉಪಕೇಂದ್ರಗಳ ಮೂಲಕವಾಗಿ ಕಾರ್ಯ ನಿರ್ವಹಿಸುತ್ತಾ ಲಾಭದಾಯಿಕವಾಗಿ ಮಾದರಿ ಸಂಘವಾಗಿ ಬೆಳೆದು ಬಂದಿದೆ. ಸರ್ವ ಸದಸ್ಯರ ಸಹಕಾರದೊಂದಿಗೆ 2014ರಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದೆ.
ಪ್ರಶಸ್ತಿ -ಪುರಸ್ಕಾರಆಡಿಟ್ ವರದಿಯಲ್ಲಿ ಸಂಘವು ಎ ಗ್ರೇಡ್ ದರ್ಜೆಯನ್ನು ಪಡೆದಿದ್ದು, ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದೆ. ಗುಣಮಟ್ಟದ ಹಾಲು ಪೂರೈಕೆಗಾಗಿ 5 ಸಲ ಒಕ್ಕೂಟದಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇಲ್ಲಿ ವರ್ಷವೊಂದಕ್ಕೆ ಸರಾಸರಿ 1,88,695 ಲೀ. ಹಾಲು ಸಂಗ್ರಹವಾಗುತ್ತದೆ.ಸಂಘ ವಾರ್ಷಿಕ 1 ಕೋ. ರೂ.ಗೂ ಮೀರಿದ ವಹಿವಾಟು ನಡೆಸುತ್ತಿದೆ. ಗ್ರಾಮೀಣ ಜನರಲ್ಲಿ ಸಂಘಟನಾ ಶಕ್ತಿಯ ಅರಿವನ್ನು ಮೂಡಿಸುವಲ್ಲಿ ಸಂಘವು ಶಕ್ತಿಮೀರಿ ಶ್ರಮಿಸುತ್ತಿದೆ. ಹೈನುಗಾರಿಕೆಯ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದ ಸಂಘದ ಸ್ಥಾಪಕರುಗಳ ಆಶಯಕ್ಕೆ ಅನುಗುಣವಾಗಿ ಸಂಘವನ್ನು ಮುನ್ನಡೆಸಲಾಗುತ್ತಿದೆ. ಹೈನುಗಾರರ ಅಭಿವೃದ್ಧಿಗೆ ಸಂಘ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದು, ಹಿಂದಿನ ಹೆಸರನ್ನು ಉಳಿಸಿಕೊಂಡು ಮತ್ತೆ ಇನ್ನಷ್ಟು ಕೀರ್ತಿ ಗಳಿಸಿಕೊಡಲು ಶ್ರಮಿಸುತ್ತಿದ್ದೇವೆ.
-ಯೋಗೀಶ್ ಪೂಜಾರಿ ಬೆಳಪು
ಅಧ್ಯಕ್ಷರು ಅಧ್ಯಕ್ಷರು
ಎಂ. ಮನೋಹರ ಶೆಟ್ಟಿ (ಸ್ಥಾಪಕ ಅಧ್ಯಕ್ಷರು), ಗ್ಯಾಬ್ರಿಯಲ್ ಅಮ್ಮನ್ನ, ಎಂ.ಎಚ್.ಬಿ. ಮಹಮ್ಮದ್, ಮನ್ಸೂರ್ ಅಹಮ್ಮದ್, ಅನಿಲ್ ಶೆಟ್ಟಿ, ಯೋಗೀಶ್ ಪೂಜಾರಿ (ಹಾಲಿ)
ಕಾರ್ಯದರ್ಶಿಸೀತಾರಾಮ ಪೂಜಾರಿ (ಸ್ಥಾಪನೆಯಾದಂದಿನಿಂದಲೂ ಕಾರ್ಯ ನಿರ್ವಹಣೆ) - ರಾಕೇಶ್ ಕುಂಜೂರು