ಅಹಮದಾಬಾದ್: ಬಸ್ಸಿನಲ್ಲಿರುವ ಪ್ರಯಾಣಿಕರಿಗಾಗಿ ತನ್ನ ಎದೆನೋವನ್ನೇ ಮರೆತು ಚಾಲಕನೊಬ್ಬ ಬಸ್ ಚಲಾಯಿಸಿಕೊಂಡು ಹೋಗಿ ಡಿಪೋಗೆ ಬಸ್ ತಲುಪಿದ ಬಳಿಕ ಹೃದಯಾಘಾತದಿಂದ ನಿಧನರಾದ ದಾರುಣ ಘಟನೆ ಗುಜರಾತಿನ ರಾಧನ್‌ಪುರದಲ್ಲಿ ನಡೆದಿರುವುದು ವರದಿಯಾಗಿದೆ.
ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಚಾಲಕನಾಗಿರುವ ಭರ್ಮಲ್ ಅಹಿರ್ ಭಾನುವಾರ ರಾತ್ರಿ 8.30 ರ ಸುಮಾರಿಗೆ ಸೋಮನಾಥದಿಂದ ಹೊರಟು ಬೆಳಗ್ಗೆ 7:05 ಕ್ಕೆ ರಾಧನ್‌ಪುರಕ್ಕೆ ತಲುಪಬೇಕಿತ್ತು. ಪಯಣದ ವೇಳೆ ಚಹಾಕ್ಕಾಗಿ ಬಸ್ಸನ್ನು ನಿಲ್ಲಿಸಿದ್ದಾರೆ. ಇನ್ನೇನು 15ಕಿ.ಮೀ ದೂರ ತಲುಪಿದರೆ ರಾಧನ್‌ಪುರ ತಲುಪುತ್ತದೆ.
ಪಯಣ ಮತ್ತೆ ಆರಂಭವಾಗುವ ವೇಳೆ ಕಂಡಕ್ಟರ್ ಬಳಿ ಚಾಲಕ ಅಹಿರ್ ತನಗೆ ಎದೆನೋವು ಆಗುತ್ತಿದೆ. ಆಸ್ಪತ್ರೆಗೆ ಹೋಗಬೇಕು ಇಲ್ಲದಿದ್ರೆ ತಾನು ಸಾಯುತ್ತೇನೆ ಎಂದಿದ್ದಾರೆ. ಆದರೆ ಇದನ್ನು ಹೇಳಿದ ಬಳಿಕವೂ ಅಹಿರ್ ತನ್ನ ಪ್ರಯಣಿಕರನ್ನು ರಸ್ತೆ ನಿಲ್ಲಿಸಬಾರದೆಂದು ಹೇಳಿ ತನ್ನ ಡಿಪೋ ಬರುವವರೆಗೆ ಬಸ್ ಓಡಿಸಿದ್ದಾರೆ. ಯಾವಾಗ ಬಸ್ ಡಿಪೋಗೆ ಬಂದು ನಿಂತಿತ್ತೋ ಆ ಕ್ಷಣದಲ್ಲೇ ಚಾಲಕ ಅಹಿರ್ ಸೀಟ್ ನಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅವರು ಆದಾಗಲೇ ಹೃದಯಾಘಾತದಿಂದ ಮೃತಪಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Karnataka Polls: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆಎಸ್ ಈಶ್ವರಪ್ಪ
ಘಟನೆ ಬಗ್ಗೆ ಮಾತನಾಡುವ ಕಂಡಕ್ಟರ್ ಚಹಾ ವಿರಾಮದ ಬಳಿಕ ಪಯಣ ಮತ್ತೆ ಆರಂಭವಾದಾಗ ನನ್ನ ಕೈ ಹಿಡಿದು ಎದೆನೋವು ಆಗುತ್ತಿದೆ. ಆಸ್ಪತ್ರೆಗೆ ಹೋಗಬೇಕು ಇಲ್ಲದಿದ್ರೆ ಸಾಯುತ್ತೇನೆ ಎಂದಿದ್ದರು. ಆದರೂ ಪ್ರಯಾಣಿಕರನ್ನು ದಾರಿ ಮಧ್ಯ ಬಿಟ್ಟು ಹೋಗಲು ಇಷ್ಟವಿಲ್ಲವೆಂದು ಎದೆನೋವನ್ನು ತಡೆದಿಟ್ಟುಕೊಂಡೇ ಬಸ್ ಚಲಾಯಿಸಿಕೊಂಡು ಬಂದಿದ್ದಾರೆ. ಅವರು ನೋವನ್ನು ನಿರ್ಲಕ್ಷ್ಯ ಮಾಡದಿದ್ದರೆ ಅವರನ್ನು ಉಳಿಸಬಹುದಿತ್ತು ಎಂದಿದ್ದಾರೆ.
ಕಳೆದ 5 ವರ್ಷದಿಂದ ಚಾಲಕನಾಗಿ ಕೆಲಸ ಅಹಿರ್ ಕೆಲಸ ಮಾಡುತ್ತಿದ್ದರು. ಅವರ ತಂದೆಯೂ ಹೃದಯಾಘಾತದಿಂದಲೇ ಮೃತಪಟ್ಟಿದ್ದರು. ಅನಗತ್ಯವಾಗಿ ಯಾವ ರಜೆಯನ್ನು ಹಾಕುತ್ತಿರಲಿಲ್ಲ. ಎಲ್ಲರನ್ನೂ ಅವರ ಜಾಗಕ್ಕೆ ತಲುಪಿಸಿ ಕೊನೆಗೆ ಅವರೇ ಬದುಕಿ ಬರಲು ಆಗಿಲ್ಲ ಎಂದು ಘಟನೆ ಬಗ್ಗೆ ಅವರ ಕುಟುಂಬದ ಸದಸ್ಯರು ಹೇಳುತ್ತಾರೆ.