Advertisement

ಎಲ್ಲೆಡೆ ಹೈಅಲರ್ಟ್; ಗುಜರಾತ್ ಗೆ ನುಸುಳಿದ ಪಾಕ್ ಕಮಾಂಡೋಸ್- ದಾಳಿ ನಡೆಸಲು ಸಂಚು; ವರದಿ

10:10 AM Aug 30, 2019 | Nagendra Trasi |

ನವದೆಹಲಿ:ಪಾಕಿಸ್ತಾನಿ ಕಮಾಂಡೋಗಳು ಕಛ್ ಪ್ರದೇಶದ ಮೂಲಕ ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಗುಜರಾತ್ ನ ಎಲ್ಲಾ ಬಂದರು ಪ್ರದೇಶಗಳಲ್ಲಿ ಗುರುವಾರ ಹೈಅಲರ್ಟ್ ಘೋಷಿಸಿರುವುದಾಗಿ ವರದಿ ತಿಳಿಸಿದೆ.

Advertisement

ಕಛ್ ನ ಕರಾವಳಿ ಪ್ರದೇಶದ ಮೂಲಕ ನುಸುಳಿ ಬರಲಿರುವ ಪಾಕ್ ಕಮಾಂಡೋಗಳು ಗುಜರಾತ್ ನಲ್ಲಿ ದಾಳಿ ನಡೆಸುವ ಮೂಲಕ ಕೋಮು ಗಲಭೆ ಹುಟ್ಟುಹಾಕುವ ಸಂಚು ನಡೆಸಿರುವುದಾಗಿ ಮೂಲಗಳು ಎನ್ ಡಿಟಿವಿಗೆ ತಿಳಿಸಿರುವುದಾಗಿ ವರದಿ ಮಾಡಿದೆ.

ಅದಾನಿ ಬಂದರು ಮತ್ತು ಎಸ್ ಇಝಡ್ ಪ್ರಕಟಣೆ ಪ್ರಕಾರ, ಪಾಕಿಸ್ತಾನದಿಂದ ತರಬೇತು ಪಡೆದ ಕಮಾಂಡೋಗಳು ಕಛ್ ಕರಾವಳಿ ಮಾರ್ಗದ ಮೂಲಕ ಗುಜರಾತ್ ಪ್ರವೇಶಿಸಲಿದ್ದು, ಅವರು ಜಲಮಾರ್ಗದಲ್ಲಿಯೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಬಗ್ಗೆ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ ಎಂದು ವಿವರಿಸಿದೆ.

ಈ ಹಿನ್ನೆಲೆಯಲ್ಲಿ ಗುಜರಾತ್ ನ ಎಲ್ಲಾ ಬಂದರು ಮತ್ತು ಕರಾವಳಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next