Advertisement
ಕೆಳಹಂತದ ಕೋರ್ಟ್‌ನ ಆದೇಶ ಪ್ರಶ್ನಿಸಿ ಹತ್ಯಾಕಾಂಡದಲ್ಲಿ ಅಸುನೀಗಿದ್ದ ಕಾಂಗ್ರೆಸ್ ನಾಯಕ ಎಹಸಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸತಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದ ಬಗ್ಗೆ ಹೈಕೋರ್ಟ್ ಅದಕ್ಕಾಗಿ ಮತ್ತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ಅವಕಾಶ ಉಂಟು ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜು.3ರಂದು ವಿಚಾರಣೆ ಮುಕ್ತಾಯವಾಗಿತ್ತು. ಹತ್ಯಾ ಕಾಂಡದ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ಗುಜರಾತ್‌ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 61 ಮಂದಿ ವಿರುದ್ಧ ಕ್ಲೀನ್‌ಚಿಟ್ ನೀಡಿತ್ತು. ಅದನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಎತ್ತಿಹಿಡಿದಿತ್ತು. 2002ರ ಫೆ.28ರಂದು ಕಾಂಗ್ರೆಸ್ ನಾಯಕ ಎಹಸಾನ್ ಜಾಫ್ರಿ ಮತ್ತು ಇತರ 68 ಮಂದಿಯನ್ನು ಗುಂಪೊಂದು ಬೆಂಕಿ ಹಚ್ಚಿ ಕೊಂದು ಹಾಕಿತ್ತು. 2013ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೋದಿ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕರಿಸಿತ್ತು.