Advertisement

Gujarat: ಮುಸ್ಲಿಮ್‌ ಮಹಿಳೆಗೆ ಆವಾಸ್‌ ಮನೆ ಕೊಟ್ಟದ್ದಕ್ಕೆ ಇತರರ ಕ್ಯಾತೆ!

12:55 AM Jun 15, 2024 | Team Udayavani |

ಅಹ್ಮದಾಬಾದ್‌: ಮುಸ್ಲಿಂ ಮಹಿಳೆಯೊಬ್ಬರಿಗೆ ಆವಾಸ್‌ ಯೋಜನೆಯಡಿ ಮನೆ ದೊರೆತಿದ್ದು, ಆ ಮನೆಯಲ್ಲಿ ವಾಸಿಸಲು ಸುತ್ತಮುತ್ತಲಿನ ಮನೆಯ ವರು ವಿರೋಧ ವ್ಯಕ್ತಪಡಿಸಿದ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಮುಸ್ಲಿಂ ಮಹಿಳೆಗೆ ಮುಖ್ಯಮಂತ್ರಿ ಆವಾಸ್‌ ಯೋಜನೆಯಡಿ ಮನೆ ನೀಡಲಾಗಿತ್ತು. ಆದರೆ ಅಲ್ಲಿಗೆ ತೆರಳುವ ಮುನ್ನವೇ ಆ ವಸತಿ ಸಮುತ್ಛಯದ ನಿವಾಸಿಗಳು ಮುಸ್ಲಿಂ ಮಹಿಳೆ ಆಗಮನಕ್ಕೆ ವಿರೋಧಿಸಿದ್ದು, ಮುಸ್ಲಿಂ ಧರ್ಮದ ಮಹಿಳೆಯೊಬ್ಬರು ನಮ್ಮ ನಡುವೆ ವಾಸಿಸುವುದು ಇಷ್ಟವಿಲ್ಲ. ಅವರಿಗೆ ಬೇರೆ ಸ್ಥಳದಲ್ಲಿ ಮನೆ ನೀಡಿ ಎಂದು ವಸತಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮನೆ ದೊರಕಿದಾಗ ಖುಷಿಯಾಗಿತ್ತು ಆದರೆ, ವಿರೋಧ ವ್ಯಕ್ತವಾದಾಗಿನಿಂದ ಬೇಸರಗೊಂಡಿ ದ್ದೇನೆ ಎಂದು ಮುಸ್ಲಿಂ ಮಹಿಳೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next