Advertisement
ಕಾಂಗ್ರೆಸ್‌ನಲ್ಲಿ ಸೂಕ್ತ ರೀತಿಯ ಅವಕಾಶ ಸಿಗದೆ ಇರುವುದರಿಂದ ಬೇಸತ್ತು ಈಗಾಗಲೇ ಕೆಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂಥ ಸಮರ್ಥ ನಾಯಕರನ್ನು ಬಿಜೆಪಿ ಗುರಿ ಮಾಡಿ, ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಂತೂ ಇರಲಿದೆ.
Related Articles
Advertisement
ಬಿಜೆಪಿ ಹಲವು ವರ್ಷಗಳಿಂದ ಗೆಲ್ಲಲು ಅಸಾಧ್ಯವಾಗಿರುವ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಪ್ರಭಾವಿ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸಿ, ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಲು ಮುಂದಾಗಿದೆ. ಛೋಟಾ ಉದಯಪುರ ಕ್ಷೇತ್ರದಲ್ಲಿ ಬುಡಕಟ್ಟು ಸಮುದಾಯದ 78 ವರ್ಷದ ಮೋಹನ್ ಸಿಂಗ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಅವರ ಬದಲಾಗಿ ಅಳಿಯನಿಗೆ ಆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ.
ಮೋದಿಯವರ ರಾಜಕೀಯ ಜೀವನದಲ್ಲಿ 2002 ಮಹತ್ವದ ವರ್ಷ. ಆ ವರ್ಷ ನಿಗದಿತ 8 ತಿಂಗಳು ಮೊದಲೇ ಗುಜರಾತ್‌ನಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಿದ್ದರು. ಆಗ ಜಯವೂ ಸಿಕ್ಕಿತ್ತು. 2012ರ ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ರಾಷ್ಟ್ರ ಮಟ್ಟಕ್ಕೆ ಪ್ರವೇಶ ಮಾಡುವ ಸುಳಿವೂ ಪ್ರಾಪ್ತವಾಗಿತ್ತು. ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಪಕ್ಷದಲ್ಲಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿಸಲಿದೆ. ಜತೆಗೆ 2024ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಫಲಿತಾಂಶದ ದಿಕ್ಸೂಚಿಗೆ ಮುನ್ನುಡಿ ಬರೆದಂತೆ ಆಗಲಿದೆ.
ಸಮಾನ ನಾಗರಿಕ ಸಂಹಿತೆ ಜಾರಿಗೆ ಆದ್ಯತೆಗುಜರಾತ್ ಚುನಾವಣೆ ಪ್ರಣಾಳಿಕೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗಾಂಧಿನಗರದಲ್ಲಿ ಬಿಡುಗಡೆ ಮಾಡಿದ್ದಾರೆ. ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ, ಉಗ್ರ ನಿಗ್ರಹಕ್ಕಾಗಿ ಯುವಕರು ತೆÌàಷಮಯ ಭಾಷಣಗಳಿಗೆ ಮಾರು ಹೋಗದಂತೆ ಮಾಡಲು ವಿಶೇಷ ಸೆಲ್ ರಚನೆ, ಸ್ಲೀಪರ್ ಸೆಲ್‌ಗಳ ರಚನೆಗೆ ತಡೆ, 20 ಲಕ್ಷ ಉದ್ಯೋಗ ಸೃಷ್ಟಿ, ಮುಂದಿನ 5 ವರ್ಷಗಳಲ್ಲಿ ಗುಜರಾತ್‌ನ ಅರ್ಥ ವ್ಯವಸ್ಥೆಯನ್ನು ಒಂದು ಲಕ್ಷಕೋಟಿ ಡಾಲರ್‌ಗೆ ಏರಿಕೆ ಮಾಡುವ ವಾಗ್ಧಾನವನ್ನು ಮಾಡಲಾಗಿದೆ. ಅಲ್ಲದೇ, ದ್ವಾರಕಾದ ಅಭಿವೃದ್ಧಿಗೆ ದೇವಭೂಮಿ ದ್ವಾರಕಾ ಕಾರಿಡಾರ್ ನಿರ್ಮಾಣ. ಅದರಲ್ಲಿ ಜಗತ್ತಿನ ಅತಿ ಎತ್ತರದ ಕೃಷ್ಣ ವಿಗ್ರಹ ನಿರ್ಮಾಣ, 3ಡಿ ಭಗವದ್ಗೀತೆ ವಲಯ ರಚನೆ. ಸೋಮನಾಥ ಅಂಬಾಜಿ, ಪಾವಗಡ ದೇಗುಲಗಳ ಅಭಿವೃದ್ಧಿ ಮಾದರಿಯಲ್ಲಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಗುಲಗಳ ಪುನರ್ ನಿರ್ಮಾಣದ ಆಶ್ವಾಸನೆಯನ್ನೂ ನೀಡಲಾಗಿದೆ.