Advertisement

ಗುಜರಾತ್‌ ಮಾದರಿ ಸಂಪುಟಕ್ಕೆ ಆಗ್ರಹ; ಸಂಕ್ರಾಂತಿಗೆ ಸಿಹಿ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು

01:46 AM Dec 30, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಗುಜರಾತ್‌ ಮಾದರಿಯ ಸಂಪುಟ ಪುನಾರಚನೆಯ ಬೇಡಿಕೆ ಆರಂಭವಾಗಿದೆ. ಈಗಾಗಲೇ ಅಧಿಕಾರ ಅನುಭವಿಸಿರುವ ಸಚಿವರನ್ನು ಕೈಬಿಟ್ಟು ಸಂಪೂರ್ಣ ಹೊಸ ಸಂಪುಟ ರಚನೆ ಮಾಡಬೇಕೆಂಬ ಆಗ್ರಹ ಜೋರಾಗಿದೆ. ಸಂಕ್ರಾಂತಿ ಹೊತ್ತಿಗೆ ಸಿಹಿ ಸುದ್ದಿ ಸಿಗುತ್ತದೆ ಎಂಬ ನಿರೀಕ್ಷೆ ಸಚಿವಾಕಾಂಕ್ಷಿಗಳಲ್ಲಿದೆ.

Advertisement

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸ ಲಾಗಿತ್ತು. ಆದರೆ ಕೇವಲ ಆರು ಮಂದಿ ಹೊಸಬ ರಿಗೆ ಮಾತ್ರ ಅವಕಾಶ ಸಿಕ್ಕಿತ್ತು.

ಈಗ ಯಡಿಯೂರಪ್ಪ ಸಂಪುಟ ದಲ್ಲಿ ಎರಡು ವರ್ಷ ಪೂರೈಸಿ, ಬಸವ ರಾಜ ಬೊಮ್ಮಾಯಿ ಅವರ ಸಂಪುಟ ದಲ್ಲಿಯೂ ಸಚಿವರಾಗಿ ಮುಂದು ವರಿದ ಹಿರಿಯರನ್ನು ಕೈ ಬಿಡಬೇಕೆಂಬ ಶಾಸಕರ ಒತ್ತಡ ಪಕ್ಷದ ನಾಯಕರಿಗೆ ಬಿಸಿ ತುಪ್ಪವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಸಕರ ಈ ಬೇಡಿಕೆಯಿಂದಾಗಿ ಹಿರಿಯ ಸಚಿವರಿಗೆ ಇರಿಸುಮುರಿಸು ಉಂಟಾಗಿದ್ದು, ತಮ್ಮ ಆಪ್ತರ ಬಳಿ ಅಸಮಾಧಾನವನ್ನೂ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಖಾಲಿ ಸ್ಥಾನ ಭರ್ತಿ ಮಾಡಿ
ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕೆಂಬ ಒತ್ತಡದ ಜತೆಗೆ ಸಂಪೂರ್ಣ ಹೊಸ ಸಂಪುಟ ರಚನೆ ಬೇಡಿಕೆಯೂ ಹೆಚ್ಚಾಗಿದೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ ಜ.9ರ ಬಳಿಕ ಸಂಕ್ರಾಂತಿ ಹೊತ್ತಿಗೆ ಏನಾದರೂ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹಾಲಿ ಸರಕಾರಕ್ಕೆ ಒಂದೂವರೆ ವರ್ಷ ಮಾತ್ರ ಅಧಿಕಾರ ಉಳಿದಿದೆ. ಈಗ ಸರಕಾರ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಬೇಸರ ಆಡಳಿತ ಪಕ್ಷದ ಶಾಸಕರಲ್ಲಿದೆ. ತಮ್ಮ ಕ್ಷೇತ್ರಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಾರದಿರುವುದು, ಘೋಷಣೆ ಯಾಗಿರುವ ಯೋಜನೆಗಳು ಸರಿಯಾಗಿ ಫ‌ಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಆಡಳಿತವನ್ನು ಚುರುಕುಗೊಳಿಸಲು ಹೊಸಬರಿಗೆ ಅವಕಾಶ ಕಲ್ಪಿಸಿ, ಹಿರಿಯ ರನ್ನು ಪಕ್ಷ ಸಂಘಟನೆಗೆ ಬಳಸಿ ಕೊಳ್ಳಬೇಕೆಂಬ ವಾದವಿದೆ. ಆದರೆ ವಿಧಾನ ಮಂಡಲದ ಜಂಟಿ ಅಧಿವೇಶನ, ಬಜೆಟ್‌ ಅಧಿವೇಶನ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ಎದುರಾಗುವುದರಿಂದ ಈ ಸಂದರ್ಭದಲ್ಲಿ ಸಂಪುಟ ಪುನಾರಚನೆ ಮಾಡಿದರೆ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಇದನ್ನೂ ಓದಿ:ದಲಿತರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಂಪುಟದಿಂದ ಕೈಬಿಡುವ ಹಿರಿಯರ ಸಾಲಿನಲ್ಲಿ ನನ್ನ ಹೆಸರಿದ್ದರೆ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನಾನು ಪಕ್ಷದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುವ ಕಾರ್ಯಕರ್ತ.
– ಕೆ.ಎಸ್‌. ಈಶ್ವರಪ್ಪ,

Advertisement

Udayavani is now on Telegram. Click here to join our channel and stay updated with the latest news.

Next