Advertisement

Pak ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ಬಂಧನ

06:35 PM Jul 08, 2023 | Team Udayavani |

ಸೂರತ್: ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಗಡಿ ಭದ್ರತಾ ಪಡೆ (BSF) ನೌಕರನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

Advertisement

ಬಂಧಿತ ಆರೋಪಿ ನೀಲೇಶ್ ಬಾಲಿಯಾ ಕಳೆದ ಐದು ವರ್ಷಗಳಿಂದ ಬಿಎಸ್‌ಎಫ್‌ನ ಭುಜ್ ಪ್ರಧಾನ ಕಚೇರಿಯಲ್ಲಿ ಸಿಪಿಡಬ್ಲ್ಯೂಡಿಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023 ರ ಜನವರಿಯಲ್ಲಿ ಪಾಕಿಸ್ಥಾನದ ಮಹಿಳಾ ಗುಪ್ತಚರ ಏಜೆಂಟ್ ಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next