ಅಹಮದಾಬಾದ್: ಹತ್ತು ವರ್ಷದ ಬಾಲಕನ ಮೇಲೆ ಮಂಗಗಳು ಮಾರಣಾಂತಿಕವಾಗಿ ದಾಳಿ ನಡೆಸಿ ಹೊಟ್ಟೆಯನ್ನು ಸೀಳಿ, ಕರುಳನ್ನು ಹೊರತೆಗೆದ ಪರಿಣಾಮ ಬಾಲಕ ಕೊನೆಯುಸಿರೆಳೆದಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಇದನ್ನೂ ಓದಿ:Tragedy: ಕಂದಕಕ್ಕೆ ಬಿದ್ದ ಬಸ್… 30 ಮಂದಿ ಮೃತ್ಯು, ಹಲವರ ಸ್ಥಿತಿ ಗಂಭೀರ
ಈ ಘಟನೆ ಗುಜರಾತ್ ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೇವಾಲಯ ಸಮೀಪ ಬಾಲಕನ ಮೇಲೆ ಮಂಗಗಳ ಗುಂಪು ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತೀಯಾದ ರಕ್ತಸ್ರಾವ, ಕರುಳು, ಹೊಟ್ಟೆ ಸೀಳಿದ್ದರಿಂದ ಚಿಕಿತ್ಸೆಗೂ ಮುನ್ನವೇ ಕೊನೆಯುಸಿರೆಳೆದಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮೃತ ಬಾಲಕನನ್ನು ದೀಪಕ್ ಠಾಕೂರ್ ಎಂದು ಗುರುತಿಸಲಾಗಿದೆ. ದೀಪಕ್ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಈ ಸಂದರ್ಭದಲ್ಲಿ ಮಂಗಗಳ ಗುಂಪು ಬಾಲಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದವು ಎಂದು ಪೊಲೀಸ್ ಹಾಗೂ ಅರಣ್ಯಾಧಿಕಾರಿಗಳು ಜಂಟಿಯಾಗಿ ತಿಳಿಸಿದ್ದಾರೆ.
ಬಾಲಕನ ಮೇಲೆ ದಾಳಿ ನಡೆಸಿ ಹೊಟ್ಟೆಯನ್ನು ಸೀಳಿ, ಕರುಳನ್ನು ಹೊರತೆಗೆದಿದ್ದವು. ಇದರ ಪರಿಣಾಮ ಬಾಲಕ ಕೊನೆಯುಸಿರೆಳೆದಿದ್ದ ಎಂದು ವರದಿ ವಿವರಿಸಿದೆ. ಕಳೆದ ಒಂದು ವಾರದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಮಂಗಗಳು, ಸಿಂಗಳೀಕ ಇದ್ದು, ಅವುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.