ಅಹಮದಾಬಾದ್: ರಾಜ್ಯಸಭಾ ಚುನಾವಣೆ ಯಲ್ಲಿ ವಿಪ್ ಉಲ್ಲಂ ಸಿ ಬಿಜೆಪಿಗೆ ಮತದಾನ ಮಾಡಿದ 7 ಮಂದಿ ಕಾಂಗ್ರೆಸ್
ಶಾಸಕರ ಸಹಿತ ಒಟ್ಟು 10 ಮಂದಿ ಶಾಸಕರು ಶೀಘ್ರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಆದರೆ ಬುಧವಾರ ಕಾಂಗ್ರೆಸ್‌ನಿಂದ ಉಚ್ಚಾಟ ನೆಗೊಂಡ ಶಂಕರ್ ಸಿನ್ಹ ವಘೇಲಾ ಅವರು ಬಿಜೆಪಿ ಸೇರ್ಪಡೆಯಾಗಲ್ಲ ಎಂದು ವಘೇಲಾರ ಪುತ್ರ ಮಹೇಂದ್ರ ಸಿನ್ಹ ಹೇಳಿದ್ದಾರೆ. ಕಾಂಗ್ರೆಸ್ ತೊರೆದ 10 ಮಂದಿಯಲ್ಲಿ ವಘೇಲಾ ಅವರ ಪುತ್ರ ಕೂಡ ಇದ್ದಾರೆ.
7 ಮಂದಿ ಉಚ್ಚಾಟನೆಗೊಳ್ಳುವ ತಿಂಗಳ ಮೊದಲೇ ಶಾಸಕ ಸ್ಥಾನಕ್ಕೆ ಮೂವರು ರಾಜೀನಾಮೆ ನೀಡಿದ್ದರು. ಬಿಜೆಪಿ ಸೇರ್ಪಡೆ ಬಗ್ಗೆ ಈಗಾಗಲೇ ಗುಜರಾತ್ ಬಿಜೆಪಿ ಅಧ್ಯಕ್ಷ ಜೀತುಭಾಯ್ ವಾಘಾನಿ ಮತ್ತು ಗುಜರಾತ್ ಸಿಎಂ ರೂಪಾನಿ ಜತೆ ಮಾತುಕತೆ ನಡೆಸಿರು ವುದಾಗಿ ಮಹೇಂದ್ರ ಸಿನ್ಹ ಹೇಳಿದ್ದಾರೆ.
ಪಟೇಲ್ ಗೆಲುವಿಗೆ ಕುತಂತ್ರ: ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸಿಗ ಅಹ್ಮದ್ ಪಟೇಲ್ ಗೆಲುವಿಗೆ ಕಾಂಗ್ರೆಸ್ ಮೊದಲೇ ಕುತಂತ್ರ ಮಾಡಿತ್ತು ಎಂದು ವಘೇಲಾ ಹೇಳಿದ್ದಾರೆ. ಚುನಾವಣೆಗೂ ಮೊದಲೇ ಕಾಂಗ್ರೆಸಿಗರು, ಇಬ್ಬರ ಮತ ಅನರ್ಹಗೊಳಿಸುವಂತೆ ಆಯೋ ಗ ವನ್ನು ಕೇಳಲು ಪತ್ರಗಳನ್ನು ಸಿದ್ಧ ಪಡಿಸಿ ದ್ದರು. ಅವರ ಮತ ಅನರ್ಹಗೊಳಿಸ ಬೇಕೇ, ಬೇಡವೇ ಎಂದು ರಿಟರ್ನಿಂಗ್ ಆಫೀಸರ್ ನಿರ್ಧರಿಸ ಬಹುದಿತ್ತು. ಇವೆಲ್ಲ ಪೂರ್ವ ನಿರ್ಧರಿತ ಪ್ಲಾನ್. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದಿದ್ದಾರೆ.
ಗುಜರಾತ್ ಅಸೆಂಬ್ಲಿ ಚುನಾವಣೆ ಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ರಾಜ್ಯಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಬಿಜೆಪಿ. ಈಗ ಗೆಲುವಿನಿಂದ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ.
– ಅಹ್ಮದ್ ಪಟೇಲ್,
ಕಾಂಗ್ರೆಸ್ ರಾಜ್ಯಸಭೆ ಸದಸ್ಯ