Advertisement

ರೈತರಿಗೆ ಪರಿಹಾರ, ಪಾಟಿದಾರ್‌ಗೆ ಸಮಾನಾವಕಾಶ: ಕೈ ಪ್ರಣಾಳಿಕೆ

07:11 PM Dec 04, 2017 | udayavani editorial |

ಹೊಸದಿಲ್ಲಿ : ಗುಜರಾತ್‌ ವಿಧಾನಸಭಾ ಚುನಾವಣೆಗಾಗಿ ಇಂದು ಸೋಮವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಪಕ್ಷ, ಒಂದೊಮ್ಮೆ ತಾನು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿನ ರೈತರಿಗೆ ನೀರಾವರಿಗಾಗಿ ದಿನವಹಿ 16 ತಾಸು  ವಿದ್ಯುತ್‌ ಪೂರೈಸಿ, ಅಗತ್ಯ ಪರಿಹಾರಗಳನ್ನು ಮಂಜೂರು ಮಾಡಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದೆ.

Advertisement

ಪಾಟಿದಾರ್‌ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ  ಸಮಾನಾವಕಾಶಗಳನ್ನು ಕಲ್ಪಿಸುವ ಭರವಸೆಯನ್ನು ಕಾಂಗ್ರೆಸ್‌ ನೀಡಿದೆ. 

ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳು ಇಂತಿವೆ : 

* ರಾಜ್ಯದ 25 ಲಕ್ಷ ಯುವರಿಗೆ ಉದೋಗ ಕಲ್ಪಿಸುವ 32,000 ಕೋಟಿ ರೂ. ಪ್ಯಾಕೇಜ್‌; ನಿರುದ್ಯೋಗಿ ಯುವಕರಿಗೆ 4,000 ರೂ ಭತ್ಯೆ.

* ಸರಕಾರಿ ಉದ್ಯೋಗದಲ್ಲಿ ಗುತ್ತಿಗೆ ಕೆಲಸ ವ್ಯವಸ್ಥೆಗೆ ಕೊನೆ; ಗುತ್ತಿಗೆ ಕೆಲಸಗಾರರನ್ನು ಖಾಯಂ ಗೊಳಿಸಲಾಗುವುದು.

Advertisement

* ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆ, ತ್ವರಿತ ತೀರ್ಪಿಗೆ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಗಳ ಸ್ಥಾಪನೆ.

* ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ಮತ್ತು ಸ್ಮಾರ್ಟ್‌ ಫೋನ್‌ಗಳು.

*ಪೆಟ್ರೋಲ್‌ ಮತ್ತು ಡೀಸಿಲ್‌ ದರವನ್ನು ಲೀಟರ್‌ಗೆ 10 ರೂ. ಇಳಿಸಲಾಗುವುದು.

* ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದ ಸದಸ್ಯರಿಗೆ ಈಗಾಗಲೇ ನೀಡಲಾಗಿರುವ ಮೀಸಲಾತಿಯಲ್ಲಿ ಮಧ್ಯ ಪ್ರವೇಶ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next