ಗುಜರಾತ್: ಪರೀಕ್ಷಾ ಹಾಲ್ ಒಳಗೆ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನ ಅಮ್ರೇಲಿ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ (ನ.3 ರಂದು) ನಡೆದಿದೆ.
ಗುಜರಾತ್‌ನ ರಾಜ್‌ಕೋಟ್‌ನ ಅಮ್ರೇಲಿ ಪಟ್ಟಣದ ಶಾಂತಬಾ ಗಜೇರಾ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 9ನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಸಾಕ್ಷಿ ರಾಜೋಸರ ಎಂಬ ಬಾಲಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ರಾಜ್‌ಕೋಟ್‌ನ ಜಸ್ದನ್ ತಾಲೂಕಿನ ವಿದ್ಯಾರ್ಥಿನಿಯಾಗಿದ್ದ ಸಾಕ್ಷಿ ಪರೀಕ್ಷೆ ಬರೆಯಲೆಂದು ಮುಂಜಾನೆ ಎಕ್ಸಾಂ ಹಾಲ್ ಯೊಳಗೆ ತೆರಳಿದ್ದಾರೆ. ಇನ್ನೇನು ಪರೀಕ್ಷೆ ಬರೆಯಲು ಕೂರಬೇಕು ಎನ್ನುವಷ್ಟರಲ್ಲೇ ಇದ್ದಕ್ಕಿದ್ದಂತೆ ಸಾಕ್ಷಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Election: ಸಿಎಂ ಆಗಿ ಪೈಲಟ್ ಬೇಡ, ಗೆಹ್ಲೋಟ್ ಸಾಕು ಎಂದ ರಾಜಸ್ಥಾನ; ಇಲ್ಲಿದೆ ಸಮೀಕ್ಷೆ ವರದಿ
ಕಳೆದ ಕೆಲ ಸಮಯದಿಂದ ವಿಶೇಷವಾಗಿ ರಾಜ್ ಕೋಟ್ ನಲ್ಲಿ ಹೃದಯಾಘಾತ ಹಾಗೂ ಹೃದಯ ಸ್ತಂಭನ ಪ್ರಕರಣಗಳು ಹೆಚ್ಚಾಗಿ ಸಂಭಿಸುತ್ತಿದೆ. ಇಂತಹ ಘಟನೆಗಳು ಪೋಷಕರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ವೃತ್ತಿಪರರಿಗೆ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.