Advertisement

“ಗಿಲಾನ್‌ ಬರ್ರೆ ಸಿಂಡ್ರೋಮ್‌’ಚಿಕಿತ್ಸೆಗೆ ನೆರವು ನೀಡಿ

06:00 AM May 24, 2018 | Team Udayavani |

ಕೋಟ: ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನೂ ಅನಾರೋಗ್ಯಕ್ಕೆಡಾದ್ದರಿಂದ ಮಗನ ಚಿಕಿತ್ಸೆಗಾಗಿ ತಾಯಿಯೊಬ್ಬರು ಪರ ದಾಡುತ್ತಿದ್ದಾರೆ.  

Advertisement

ಇಲ್ಲಿನ ನಿವಾಸಿ ಸಾಧು ಮರಕಾಲ್ತಿಯವರ ಪುತ್ರ ಮಂಜುನಾಥ ಮರಕಾಲ ಅವರು ಗಿಲಾನ್‌ ಬರ್ರೆ ಸಿಂಡ್ರೋಮ್‌ ಎಂಬ ಕಾಯಿಲೆಗೆ ಈಡಾಗಿದ್ದಾರೆ. ಬಡವರಾದ ಮಂಜುನಾಥ ಅವರು ತಾಯಿಯ ನೆರವಿನಿಂದಲೇ ಶಿಕ್ಷಣ ಪಡೆದಿದ್ದು, ಬಳಿಕ ಬೆಂಗಳೂರಿನ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ್ದರು. ಕೆಲವು ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿದ್ದು, ನಾರಾಯಣ ಹೃದಯಾಲದ ವೈದ್ಯರು ಆತನಿಗೆ ಲಕ್ಷಕ್ಕೊಬ್ಬರಿಗೆ ಬರಬಹುದಾದ ಗಿಲಾನ್‌ ಬರ್ರೆ ಸಿಂಡ್ರೋಮ್‌ (ದೇಹದ ಜೀವ ನಿರೋಧಕ ವ್ಯವಸ್ಥೆ ನರಗಳ ಮೇಲೆ ದಾಳಿ ಮಾಡುವುದು) ಇದೆ ಎಂದು ತಿಳಿಸಿದರು. ಈ ಕಾಯಿಲೆಯಿಂದಾಗಿ ಮಂಜುನಾಥ್‌ ಅವರ ದೇಹ ಸಂಪೂರ್ಣ ಶಕ್ತಿ ಕಳೆದುಕೊಂಡಿದೆ.  

ಅದಾಗಲೇ ಅವರ ಚಿಕಿತ್ಸೆ ವೆಚ್ಚ 7 ಲಕ್ಷ ರೂ. ದಾಟಿತ್ತು. ಹಿಂದೆ ತಾಯಿಗೂ ಅನಾರೋಗ್ಯವಿದ್ದರಿಂದ ಮಂಜುನಾಥ್‌ ಅವರು ಲಕ್ಷಾಂತರ ರೂ. ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದು, ಇದರಿಂದ ತಾಯಿ ಸಾಧು ಅವರಿಗೆ ಹಣಕ್ಕೆ ಸಮಸ್ಯೆಯಾಗಿದೆ. ಇದೀಗ ಕಂಪನಿ ಮತ್ತು ಸ್ನೇಹಿತರು ಬಿಲ್‌ ಪಾವತಿ ಮಾಡಿ ಮಣಿಪಾಲ ಆಸ್ಪತ್ರೆಗೆ ಅವರನ್ನು ಕಳಿಸಿಕೊಟ್ಟಿದ್ದಾರೆ. ಇಲ್ಲೀಗ ದಿನಕ್ಕೆ 25 ಸಾವಿರ ರೂ.ವೆಚ್ಚಾಗುತ್ತಿದ್ದು, ಯಾವುದೇ ವಿಮಾ ಸೌಲಭ್ಯಗಳು ಇಲ್ಲದ್ದರಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ ಪಾವತಿ ಮಾಡಬೇಕಾಗಿದೆ. 

ಪ್ರಸ್ತುತ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್‌ ಈ ಕುಟುಂಬದ  ಸಹಕಾರಕ್ಕೆ ನಿಂತಿದ್ದು, ಆಸರೆ ಎನ್ನುವ ಹೆಸರಲ್ಲಿ ದಾನಿಗಳ ಮೂಲಕ ಸಹಕಾರ ನೀಡಲು ಮುಂದಾಗಿದೆ. ಕುಟುಂಬಕ್ಕೆ  ಹೆಚ್ಚಿನ ಹಣಕಾಸು ಸಹಕಾರ ಅಗತ್ಯವಿದ್ದು ಸಹಾಯ ಮಾಡಲಿಚ್ಛಿಸುವವರು ಸಾಧು ಮರಕಾಲ್ತಿ ಅವರ ಕಾರ್ಪೊರೇಶನ್‌ ಬ್ಯಾಂಕ್‌ ಕೋಟ ಮಣೂರು ಶಾಖೆಯ 017800101007991 IFSC CODE: CORP0000178 ಖಾತೆ ಸಂಖ್ಯೆಗೆ ಹಣ ಜಮಾ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9449917283 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next